ರಾರಾಸಂ ಫೌಂಡೇಶನ್ – 9ನೇ ವರ್ಷದ ರಾರಸಂಭ್ರಮ….
ಬಂಟ್ವಾಳ: ವಿವಿಧ ಸ್ಪರ್ಧೆಯನ್ನು ನಿರಂತರವಾಗಿ, ನಿರಾಯಾಸವಾಗಿ ಮಾಡಿರುವ ರಾರಾಸಂ ತಂಡದ ಸಂಘಟನಾ ಶಕ್ತಿ ಮೆಚ್ಚುವಂತದ್ದು, ರಾರಾಸಂನ ಎಲ್ಲಾ ಕಾರ್ಯಗಳಿಗೆ ಲಯನ್ಸ್ ಸಹಕಾರವಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಹೇಳಿದರು.
ರಾರಾಸಂ ಫೌಂಡೇಶನ್ ಬಂಟ್ವಾಳ ಇದರ 9ನೇ ವರ್ಷದ ರಾರಸಂಭ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತಿಥಿಗಳಾಗಿ ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಅರುಣ್ ಪುರ್ಟಾಡೋ, ಜೇಸಿಐನ ನಿಕಟ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರ್, ಜೇಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ, ಜೇಸಿಯ ಮಡಂತ್ಯಾರ್ ನ ಅಧ್ಯಕ್ಷ ಪ್ರಶಾಂತ್ ಕಂಡೆತ್ಯಾರ್, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಪುರಂದರ ಎ., ಸುಧಾಕರ ಸಾಲ್ಯಾನ್ ಸುರತ್ಕಲ್ ಉಪಸ್ಥಿತರಿದ್ದರು.
ಕಾಮನ್‍ವೆಲ್ತ್ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ ಚಿನ್ನದ ಪದಕ ವಿಜೇತ ಋತ್ವಿಕ್ ಅಲೆವೂರಾಯ ಅವರಿಗೆ ರಾರಾಸಂ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತರಾಷ್ಟ್ರೀಯ ದೇಹಧಾಡ್ಯ ಪಟು ಸೂರಜ್ ಕೆ. ಅವರಿಂದ ದೇಹಧಾಡ್ಯ ಪ್ರದರ್ಶನ ನಡೆಯಿತು.
ರಾರಾಸಂ ಫೌಂಡೇಶನ್‍ನ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ದಾಮೋದರ ಮಾಸ್ತರ್ ವಂದಿಸಿದರು. ನಿರ್ದೇಶಕ ಕೇಶವ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.