ಪೆರಾಜೆ – ಕೂಸಿನ ಮನೆ ಉದ್ಘಾಟನೆ…

ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್ ನ ವಠಾರದಲ್ಲಿ “ಕೂಸಿನ ಮನೆ”ಯ ವಿಧ್ಯುಕ್ತ ಉದ್ಘಾಟನೆ ಯನ್ನು ವಿವೇಕಾನಂದ ಜಯಂತಿಯಂದು ಪೆರಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಕುಶಲ ಎಂ. ಪೆರಾಜೆ ಉದ್ಘಾಟಿಸಿದರು.
ಹಿರಿಯರಾದ ಬಿ. ಟಿ. ನಾರಾಯಣ ಭಟ್ ಮಕ್ಕಳ ಆಟದ ಕೊಠಡಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಪೆರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ರೈ ಪಾನೂರು, ಶ್ರೀಮತಿ ಮಮತಾ ಕುಮಾರಿ, ರಾಜಾರಾಮ ಕಾಡೂರು, ಪಿ. ಡಿ.ಒ. ಶಂಭು ಕುಮಾರ ಶರ್ಮಾ, ಕಾರ್ಯದರ್ಶಿ ನಾರಾಯಣ ನಾಯ್ಕ, ಶಿಶು ಪುಟಾಣಿ ಮಕ್ಕಳು, ಪೋಷಕರು, ಪಂಚಾಯತ್ ಸಿಬ್ಬಂದಿ ಯವರು,ಪತ್ರಕರ್ತರಾದ ಜಯಾನಂದ ಪೆರಾಜೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.