ಶಿರಾಡಿ ಘಾಟಿಯ ಬಳಿ ಟ್ಯಾಂಕರ್‌ನಲ್ಲಿ ಚಾಲಕನ ಶವ ಪತ್ತೆ…..
ಉಪ್ಪಿನಂಗಡಿ:ಟ್ಯಾಂಕರ್ ಒಂದರಲ್ಲಿ ಚಾಲಕನ ಶವ ಪತ್ತೆಯಾದ ಘಟನೆ ಶುಕ್ರವಾರ ಶಿರಾಡಿ ಘಾಟಿಯ ಕೆಂಪು ಹೊಳೆಯಲ್ಲಿ ನಡೆದಿದೆ.
ಕೆಂಪುಹೊಳೆಯಿಂದ 10 ಕಿ.ಮೀ. ದೂರದಲ್ಲಿ ಹೊಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್ ನಿಂತಿರುವುದನ್ನು ಗಮನಿಸಿದ ಅದೇ ಕಂಪೆನಿಯ ಇನ್ನೋರ್ವ ಚಾಲಕ ಟ್ಯಾಂಕರ್ ಬಳಿ ಚಾಲಕನನ್ನು ಮಾತನಾಡಿಸಲು ತೆರಳಿದಾಗ ಚಾಲಕ ಕಂಡಿರಲಿಲ್ಲ. ಹುಡುಕಾಡಿದಾಗ ಟ್ಯಾಂಕರ್‌ನ ಮೇಲ್ಭಾಗದ ಮುಚ್ಚಳ ತೆಗೆದುಕೊಂಡಿದ್ದು, ಒಳಗಡೆ ಆತನ ಶವ ಪತ್ತೆಯಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.