ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರೀತಂ ಶೆಟ್ಟಿ- ಆಶಿತಾ ಶೆಟ್ಟಿ ದಂಪತಿಗಳಿಗೆ ಸನ್ಮಾನ…

ಸುಳ್ಯ: ಬೆಂಗಳೂರಿನ ವಿವಿದೆಡೆ ಹಲವಾರು ಉದ್ಯಮಗಳನ್ನು ಸ್ಥಾಪಿಸಿ ಪ್ರತಿಷ್ಠಿತ ” Xarm Marketing Solution Pvt Ltd- Experiential Marketing Agency, Restaurant Chain -Coast by Chef Ashitha Mangalore Sea Food Restaurant, Catering Service, Cha Angadi -Modern Tea outlet ಹೀಗೆ ವಿವಿಧ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಹಲವಾರು ದುಡಿಯುವ ಕೈಗಳಿಗೆ ಆಸರೆಯಾಗಿ ಜನ ಮನ್ನಣೆಯನ್ನು ಗಳಿಸಿದ ಪುತ್ತೂರಿನ ಪ್ರೀತಂ ಶೆಟ್ಟಿ ಅರಿಯಡ್ಕ ಹಾಗೂ ಸುಳ್ಯದವರೇ ಆದ ಮೊರಂಗಲ್ಲು ಆಶಿತಾ ಶೆಟ್ಟಿ ದಂಪತಿಗಳಿಗೆ ಯಶಸ್ವೀ ಉದ್ಯಮಿ ಎಂಬ ನೆಲೆಯಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯ ತಾಲ್ಲೂಕು ವಾಲಿಬಾಲ್ ಅಸೋಸಿಯೇಶನನ್ ನ ಕೋಶಾಧಿಕಾರಿ ಕೆ.ಬಿ.ಇಬ್ರಾಹಿಂ ರವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಹಾಗೂ ನ.ಪಂ. ಸದಸ್ಯ ರಿಯಾಝ್ ಕಟ್ಟೆಕ್ಕಾರ್, ನ.ಪಂ. ಸದಸ್ಯ ಶರೀಫ್ ಕಂಠಿ, ಟ್ರಸ್ಟ್ ಸದಸ್ಯ ಶಿಹಾಬ್ ಕೇರ್ಪಳ, ಸುಪ್ರೀತ್ ಮೊಂಟಡ್ಕ ಮೊದಲಾದವರು ಉಪಸ್ಥಿತರಿದ್ದರು.

whatsapp image 2024 01 16 at 10.44.45 am

Sponsors

Related Articles

Back to top button