ಅನುಮತಿ ಪಡೆಯದೆ ಪ್ರತಿಭಟನೆ – ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ವಿರುದ್ಧ ದೂರು….
ಬಂಟ್ವಾಳ : ಅನುಮತಿ ಪಡೆಯದೆ ಧ್ವನಿವರ್ಧಕ ಬಳಸಿಕೊಂಡು ಕೈಕಂಬ ಬಳಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ 30 ಜನ ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ರಾತ್ರಿ ಸುಮಾರು 7 ಗಂಟೆಗೆ 30 ಜನರು ಕೈಕಂಬದಲ್ಲಿ ಬಾವುಟ ಹಿಡಿದು ಧ್ವನಿವರ್ಧಕ ಬಳಿಸಿಕೊಂಡು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘಟನೆಗಳ ಮುಖಂಡರಾದ ಫಾಹದ್, ಇಸಾಕ್ ಶಾಂತಿ ಅಂಗಡಿ, ನೌಶೀರ್, ಅಶ್ರಫ್ ಸೇರಿದಂತೆ ಸುಮಾರು 30 ಮಂದಿ ಅನುಮತಿ ಪಡೆಯದೇ ಧ್ವನಿವರ್ದಕ ಬಳಿಸಿ ಪ್ರತಿಭಟನೆ ನಡೆಸಿದ್ದು ಅವರ ಮೇಲೆ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.





