ಜ.31 :ಲಯನ್ಸ್ ಜಿಲ್ಲೆ 317 ಪ್ರಾಂತೀಯ ಸಮ್ಮೇಳನ – “ಮಾಣಿಕ್ಯ”ಆಮಂತ್ರಣ ಪತ್ರಿಕೆ ಬಿಡುಗಡೆ…
ಬಂಟ್ವಾಳ, ಜ 09 : ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317ಡಿ, ಪ್ರಾಂತ್ಯ 6ರ ಪ್ರಾಂತೀಯ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವೇ.ಮೂ. ಪಳನೀರು ಅನಂತ ಭಟ್ ಪ್ರಾರ್ಥನೆ ನೆರವೇರಿಸಿ, ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಮತ್ತು ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.
ಪ್ರಾಂತೀಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಸಮ್ಮಿಲನ ಸಮಿತಿ ಅಧ್ಯಕ್ಷ ಗಂಗಾಧರ ರೈ ತುಂಗೆರೆಕೋಡಿ, ಕೋಶಾಧಿಕಾರಿ ಉಮೇಶ್ ಬರಿಮಾರು, ಸಮ್ಮಿಲನ ಸಮಿತಿ ಸಂಚಾಲಕ ದಾಮೋದರ ಬಿ.ಎಂ. ಮಾರ್ನಬೈಲು, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ, ಕಾರ್ಯದರ್ಶಿ ರತ್ನಾಕರ ರೈ ಗೋಳಿಕಟ್ಟೆ, ಖಜಾಂಚಿ ರಾಜೇಶ್ ಶೆಟ್ಟಿ ಬದಿಗುಡ್ಡೆ, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಎಂ. ರೋಹಿತಾಶ್ವ ಮುಡಿಮಾರುಗುತ್ತು ಉಪಸ್ಥಿತರಿದ್ದರು.
ಪ್ರಾಂತೀಯ ಸಮ್ಮಿಲನ ಸಮಿತಿ ಪ್ರಮುಖರುಗಳಾದ ಡಾ| ಶ್ರೀನಾಥ್ ಆಳ್ವ ಪೆರಾಜೆಗುತ್ತು, ಮೋಹನದಾಸ ಶೆಟ್ಟಿ ಅಮೈ, ಕೆ. ಎನ್. ಗಂಗಾಧರ ಆಳ್ವ ಅನಂತಾಡಿ, ಕೂಸಪ್ಪ ಪೂಜಾರಿ ಕಡೇಶ್ವಾಲ್ಯ, ಎಸ್. ನಾರಾಯಣ ಸಾಲಿಯಾನ್ ಅನಂತಾಡಿ, ಜಯಾನಂದ ಪೆರಾಜೆ, ಉಮೇಶ್ ಸಪಲ್ಯ ಪೆರಾಜೆ, ಹರೀಶ್ ಕುಲಾಲ್ ಬಾನೊಟ್ಟು, ಸಂದೀಪ್ ಕುಮಾರ್ ನಾಗನವಳಚ್ಚಿಲು, ದೇವಿಕಾ ದಾಮೋದರ್ ಮತ್ತಿತರರು ಭಾಗವಹಿಸಿದ್ದರು.
ಇದೇ 2026 ಜನವರಿ 31ರಂದು ಸಂಜೆ ಬಂಟ್ವಾಳ ತಾಲೂಕು ಮೆಲ್ಕಾರ್ ಸಮೀಪದ ಸಜೀಪ ಕಂದೂರಿನಲ್ಲಿರುವ ಬಜಾರ್ ಆಡಿಟೋರಿಯಂನಲ್ಲಿ ನಡೆಯಲಿರುವ ‘ಮಾಣಿಕ್ಯ’ ಪ್ರಾಂತೀಯ ಸಮ್ಮಿಲನದ ಆಮಂತ್ರಣ ಪತ್ರಿಕೆಯನ್ನು ಅಪರಾಹ್ನ ಪಾಣೆಮಂಗಳೂರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಪ್ರಧಾನ ಅರ್ಚಕ ವೇ.ಮೂ.ಮಹೇಶ್ ಭಟ್ಟರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.





