ದ.ಕ – ಮತ್ತೆರಡು ಕೊರೋನಾ ಪಾಸಿಟಿವ್…

ಮಂಗಳೂರು: ಜಿಲ್ಲೆಯಲ್ಲಿ ಇಂದು ಮತ್ತೆರಡು ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 45 ವರ್ಷದ ಪುರುಷ ಹಾಗೂ 80 ವರ್ಷದ ಮಹಿಳೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ರೋಗಿ ಸಂಖ್ಯೆ ಪಿ 432 ರ ಜೊತೆ ಸಂಪರ್ಕ ಹೊಂದಿರುವ 45 ವರ್ಷದ ಪುರುಷ ಹಾಗೂ 80 ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆ ವರದಿ ಸ್ವೀಕೃತವಾಗಿದ್ದು, ಇವರಿಗೆ ಸೋಂಕು ಇರುವುದು ದೃಢಪಟ್ಟಿರುತ್ತದೆ. ಇವರಿಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ತಾಯಿ ಹಾಗೂ ಮಗನಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇವರು ಮಂಗಳೂರಿನ ಕುಲಶೇಖರ ಸಮೀಪದ ನಿವಾಸಿಯಾಗಿದ್ದಾರೆ.

ಇನ್ನು ವಿಜಯಪುರ, ಬಾಗಲಕೋಟೆ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಎರಡು ಹೊಸ ಕೇಸ್​ಗಳು ದಾಖಲಾಗಿದ್ದು, ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ತಲಾ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

IMG 20200427 WA0032 225x300

Related Articles

Leave a Reply

Your email address will not be published. Required fields are marked *