ಅರಂತೋಡು-ಅಂಗಡಿಮಜಲು ಕಾಂಕ್ರೀಟ್ ರಸ್ತೆ ಬದಿಗಳಿಗೆ ಮಣ್ಣು ಹಾಕಿ ಶ್ರಮದಾನ..

ಸುಳ್ಯ: ಸುಳ್ಯ ಶಾಸಕರ ಅಭಿವೃದ್ಧಿ ನಿಧಿಯ 20ಲಕ್ಷ ರೂಪಾಯಿ ಅನುದಾನದಲ್ಲಿ ಅರಂತೋಡು ಅಂಗಡಿಮಜಲು ರಸ್ತೆಗೆ ಕಾಂಕ್ರೀಟ್ ಕೆಲಸ ಮುಕ್ತಾಯಗೊಂಡಿದ್ದು, ಇದೀಗ ರಸ್ತೆಯ ಎರಡು ಬದಿಗಳಿಗೆ ಮಣ್ಣು ತುಂಬಿಸುವ ಕಾರ್ಯ ನಡೆಯತ್ತಿದೆ. ಇನ್ನು ಸಂಚಾರಕ್ಕೆ ಮುಕ್ತವಾಗಲಿದ್ದು, ಮರ್ಕಂಜ ಮತ್ತು ದೊಡ್ಡತೋಟ ಗ್ರಾಮಗಳಿಗೆ ಹತ್ತಿರದ ರಸ್ತೆಯಾಗಲಿದೆ. ಕಾಂಕ್ರೀಟ್ ರಸ್ತೆ ಬದಿ ಮಣ್ಣು ತುಂಬಿಸಲು ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ,ಲೋಹಿತ್ ಕುರುಂಜಿ,ರಕ್ಷಿತ್ ,ಯತೀಶ್, ಗುತ್ತಿಗೆದಾರ ಮಹೇಶ್ ಕುತ್ತಮೊಟ್ಟೆ ಮತ್ತಿತರರು ಸಹಕರಿಸಿದರು.