ಸುಳ್ಯ – ಜೀರೋ ಟ್ರಾಫಿಕ್ ನಲ್ಲಿ ರೋಗಿಯ ಸಂಚಾರಕ್ಕೆ ನೆರವಾದ ಜನತೆ…
ಸುಳ್ಯ: ಕೊಡಗು ಮಡಿಕೇರಿ ಮೂಲದ ರೋಗಿಯೊಬ್ಬರನ್ನು ತುರ್ತಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ಜೀರೋ ಟ್ರಾಫಿಕ್ ಮಾಡಿ ಸಹಕರಿಸಲಾಯಿತು.
ದ.ಕ. ಜಿಲ್ಲೆಯಲ್ಲಿ ಸ್ವಲ್ಪ ಸಹಾಯ ಮಾಡಿ ಎಂಬಂತೆ ಸುಳ್ಯದ ನಗರ ಪಂಚಾಯತ್ ಸದಸ್ಯ ಷರೀಫ್ ಕಂಠಿಯವರಿಗೆ ಬಂದ ಬೇಡಿಕೆಯನ್ನು ಅನುಸರಿಸಿ ಸುಳ್ಯ ಮೂಲಕ ತುರ್ತು ವಾಹನ ಹಾದುಹೋಗಲು ಅವರು ಪಣತೊಡುತ್ತಾರೆ. ಷರೀಫ್ ರವರು ತಕ್ಷಣ ಸ್ನೇಹಿತ ತಾಜುದ್ದೀನ್ ಟರ್ಲಿಯವರಿಗೆ ಮಾಹಿತಿ ನೀಡಿ ತುರ್ತಾಗಿ ಒಂದು ವಾಟ್ಸಾಪ್ ಗುಂಪು ರಚಿಸಿ ಜಿಲ್ಲೆಯ ಎಲ್ಲ ಸಾಮಾಜಿಕ ಕಾರ್ಯಕರ್ತರು ಸೇರಿಕೊಳ್ಳುವ ಹಾಗೆ ಮಾಡಿ ತುರ್ತು ಸ್ಪಂದನೆ ನೀಡುತ್ತಾರೆ. ಕೆಲವೇ ಕ್ಷಣಗಳಲ್ಲಿ ವಾಟ್ಸಾಪ್ ಗುಂಪು ಬರ್ತಿಯಾಗಿ ಅಲ್ಲಲ್ಲಿ ಸ್ವಯಂ ಸೇವಕರು ರಸ್ತೆ ಕ್ಲೀಯರ್ ಮಾಡುತ್ತಲೇ ತುರ್ತು ವಾಹನ ಸಂಪಾಜೆ ಗಡಿ ಮೂಲಕ ಜಿಲ್ಲೆ ಪ್ರವೇಶಿಸಿ, ನಂತರ ಸಂಪಾಜೆಯಿಂದ ದೇರಳಕಟ್ಟೆಗೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ತುರ್ತು ವಾಹನ ತಲುಪಿತು.
ಜಿಲ್ಲೆಯಾದ್ಯಂತ ಮಾನವೀಯ ನೆಲೆಯಲ್ಲಿ ಆ ತುರ್ತು ವಾಹನ ಸಂಚಾರಕ್ಕೆ ಜಾತಿ ಬೇದ ಮರೆತು ಸಹಕರಿಸಿದ ಎಲ್ಲ ಸ್ವಯಂ ಸೇವಕರಿಗೂ,ಜಿಲ್ಲೆಯ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳಿಗೂ,ಚಾಲಕ ಮಿತ್ರರಿಗೂ,ಬೆಂಗಾವಲು ವ್ಯವಸ್ಥೆ ಮಾಡಿದ ಹಲವು ಆಂಬ್ಯುಲೆನ್ಸ್ ಚಾಲಕರಿಗೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲ ಸಾರ್ವಜನಿಕರಿಗೂ,ವಿಶೇಷವಾಗಿ ತಕ್ಷಣ ಸ್ಪಂದಿಸಿ ವಾಟ್ಸಾಪ್ ಗುಂಪು ರಚಿಸಿ ವಾಟ್ಸಾಪ್ ಹೀಗೂ ಉಪಯೋಗಿಸಬಹುದು ಎಂಬಂತೆ ಮಾಡಿದ ತಾಜುದ್ದೀನ್ ಟರ್ಲಿಯವರಿಗೆ ರೋಗಿಯ ಪುತ್ರ ರಾಝಿಕ್ ಕಡಂಗ ಧನ್ಯವಾದ ಸಲ್ಲಿಸಿದ್ದಾರೆ.