ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷ ಬಿ. ಶ್ರೀನಿವಾಸ್ ರನ್ನು ದೆಹಲಿ ಕ್ರೈಂ ಬ್ರಾಂಚ್ ವಿಚಾರಣೆ ಮಾಡಿದ್ದು ಖಂಡನೀಯ: ಟಿ.ಎಂ.ಶಾಹೀದ್ ತೆಕ್ಕಿಲ್…
ಸುಳ್ಯ: ಕೋವಿಡ್ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೀಡಾದ ದೆಹಲಿಯ ಕನ್ನಡಿಗರ ಸಹಿತ ಅನೇಕ ಜನರಿಗೆ ಆಂಬುಲೆನ್ಸ್, ಆಕ್ಸಿಜನ್, ಪಿ ಪಿ.ಇ. ಕಿಟ್, ಔಷಧಿಗಳ ಸಹಾಯ ಹಸ್ತವನ್ನು ನೀಡುತ್ತಿದ್ದ ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷ ಬಿ. ಶ್ರೀನಿವಾಸ್ ಅವರನ್ನು ದೆಹಲಿಯ ಕ್ರೈಂ ಬ್ರಾಂಚ್ ಪೋಲಿಸರು ವಿಚಾರಣೆ ನಡೆಸಿದ ಕ್ರಮವನ್ನು ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಖಂಡಿಸಿದ್ದಾರೆ.
ಕೋವಿಡ್ ಅಲೆಯಲ್ಲಿ ನರಳುತ್ತಿರುವ ಜನರಿಗೆ ಆಂಬ್ಲುಲೆನ್ಸ್, ಆಕ್ಸಿಜನ್ ಹಾಗೂ ಲಸಿಕೆಯನ್ನು ನೀಡಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದನ್ನು ಮರೆಮಾಚಲು ಕೇಂದ್ರ ಸರಕಾರ ಪೋಲಿಸರನ್ನು ಕಳುಹಿಸಿ ಮಾಡಿದ ಷಡ್ಯಂತರ ಇದಾಗಿದೆ. ಈ ರೀತಿಯ ನೀಚ ಪ್ರವೃತ್ತಿಗೆ ಕೇಂದ್ರ ಸರಕಾರ ಮುಂದಾಗಿದ್ದು ನಾಚಿಕೆಗೇಡು ಎಂದು ಟಿ.ಎಂ.ಶಾಹೀದ್ ಟೀಕಿಸಿದ್ದಾರೆ.