ಕೊಡಗು ಜಿಲ್ಲಾ ಸಮಸ್ತ ನಾಯಕರ ಮೊಹಲ್ಲಾ ಭೇಟಿ ಹಾಗೂ ಸಮಸ್ತ ಶತಮಾನೋತ್ಸವದ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ…
ಸುಳ್ಯ:ಸಮಸ್ತ ಶತಮಾನೋತ್ಸವ ಮಹಾ ಸಮ್ಮೇಳನದ ಪ್ರಚಾರದ ಅಂಗವಾಗಿ ನವಂಬರ್ 29 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿರುವ ಸಮಸ್ತ ಕೊಡಗು ಜಿಲ್ಲಾ ಸಮ್ಮೇಳನದ ಪ್ರಚಾರರ್ಥ ಹಮ್ಮಿಕೊಂಡ ಜಿಲ್ಲಾ ನಾಯಕರ ಮೊಹಲ್ಲಾ ಭೇಟಿ ನ.19 ರಂದು ಕೊಯಿನಾಡು ,ಸಂಪಾಜೆ,ಕಲ್ಲುಗುಂಡಿ, ಪೇರಡ್ಕ ,ಅರಂತೋಡು ,ಪೆರಾಜೆ, ಸುಳ್ಯ,ಮಂಡೆಕೋಲು,ಅಜ್ಜ ವಾರ,ಬೆಳ್ಳಾರೆ ಜುಮ್ಮಾ ಮಸೀದಿಗೆ ಭೇಟಿ ನೀಡಿದರು.
ಸರ್ವ ಜಮಾ ಆತ್ ಸದಸ್ಯರು ಅತ್ಯಂತ ಸಂತೋಷದಿಂದ ಅವರನ್ನು ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಮಸ್ತ ನಾಯಕರಾದ ಕೊಡಗು ಸಂಯುಕ್ತ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಎಡಪಾಲ, ಕೊಡಗು ಜಿಲ್ಲೆ ಜಮಿಯ್ಯುತುಲ್ ಉಲಮಾ ಕಾರ್ಯದರ್ಶಿ ಉಸ್ಮಾನ್ ಫೈಝಿ, ಉಮ್ಮರ್ ಫೈಝಿ,ಸಿ.ಎಂ ಹಮೀದ್ ಮುಸ್ಲಿಯಾರ್,ತಮ್ಲಿಕ್ ದಾರಿಮಿ,ಇಕ್ಬಾಲ್ , ಅಶ್ರಫ್ ಮುಸ್ಲಿಯಾರ್,ಅಬ್ದುಲ್ ರಹಿಮಾನ್ ಉಸ್ತಾದ್,ಸಂಶುದ್ದೀನ್ ದಾರಿಮಿ ಬಿಳಿಯಾರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆಎಂ ಮಹಮ್ಮದ್, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್ ಅರಂತೋಡು ಜಮಾ ಆತ್ ಸದಸ್ಯರಾದ ಮೋಯಿದು ಕುಕ್ಕುಂಬಳ , ಮೋಯಿದುಕುಟ್ಟಿ,ಸೂಫಿ, ಇಸಾಕುದ್ದಿನ್ ಸೌದಿ,ಮುಸ್ತಫಾ,ಮಹಮ್ಮದ್ ಅಳಿಕೆ,ಹಮೀದ್,ಸಯ್ಯದ್ ಕುಂಬ್ರ, ನೌಫಲ್ ,ಇಕ್ಬಾಲ್ ಗುಂಡಿ,ಇದ್ದರು.ಅಬ್ದುಲ್ ಖಾದರ್ ಸ್ವಾಗತಿಸಿ ತಾಜುದ್ದೀನ್ ಅರಂತೋಡು ವಂದಿಸಿದರು.




