ಅರಂತೋಡು ನೆಹರು ಸ್ಮಾರಕ ಪ. ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ…

ಆರೋಗ್ಯಯುತ ಜೀವನಕ್ಕೆ ಯೋಗ ಸಹಕಾರಿ -ಕೆ.ಆರ್ ಗಂಗಾಧರ್…

ಸುಳ್ಯ: ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕತ ಹಾಗೂ ಕಾಲೇಜಿನ ಸಂಚಾಲಕರಾದ ಕೆ. ಆರ್. ಗಂಗಾಧರ್ ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿ ಮಾತನಾಡಿ, ಜಗತ್ತಿಗೆ ಭಾರತದ ಪ್ರಮುಖ ಕೊಡುಗೆಗಲ್ಲಿ ಯೋಗ ಪ್ರಮುಖ ವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಗ ಪರಂಪರೆಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದು ಕೊಟ್ಟಿದ್ದಾರೆಂದು ಉಲ್ಲೇಖಿಸಿದರು. ಬಾಲ್ಯದಿಂದ ನಿರಂತರವಾಗಿ ಯೋಗವನ್ನು ಅಭ್ಯಾಸ ಮಾಡಿದಾಗ ಆರೋಗ್ಯಯುತ ಜೀವನ ಸಾಗಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರಮೇಶ್ ಎಸ್ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪತಂಜಲಿ ಯೋಗ ಸಂಸ್ಥೆಯ ಸದಸ್ಯರಾದ ಸುರೇಶ್ ವಾಗ್ಲೆ ವಿದ್ಯಾರ್ಥಿಗಳಿಗೆ ಸೂಕ್ಷ ವ್ಯಾಯಾಮ, ಆಸನಗಳು ಪ್ರಾಣಾಯಾಮಗಳ ಮಹತ್ವವನ್ನು ತಿಳಿಸಿ ಅಭ್ಯಾಸಮಾಡಿಸಿದರು. ಯೋಗ ಪರಿಣಿತರಾದ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಸಹಕರಿಸಿದರು.
ಆಂಗ್ಲಭಾಷ ಉಪನ್ಯಾಸಕಿ ಶ್ರಿಮತಿ ಅಶ್ವಿನಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಶ್ರೀಮತಿ‌ ವಿದ್ಯಾಶಾಲಿನಿ ವಂದಿಸಿದರು. ಇತಿಹಾಸ ಉಪನ್ಯಾಸಕ ಮೋಹನಚಂದ್ರ ಕಾರ್ಯಕ್ರಮ ನಿರೂಪಿಸಿದರು. ರಾಸಾಯನಶಾಸ್ತ್ರ ಉಪನ್ಯಾಸಕ ಲಿಂಗಪ್ಪ , ದೈಹಿಕ ಶಿಕ್ಷಣ ಉಪನ್ಯಾಸಕಿ ಶ್ರೀಮತಿ ಶಾಂತಿ, ಗಣಿತಶಾಸ್ತ್ರ ಉಪನ್ಯಾಸಕಿ
ಶ್ರೀಮತಿ ಭಾಗ್ಯಶ್ರೀ, ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಂದಿನಿ , ಕಂಪ್ಯೂಟರ್ ಶಿಕ್ಷಕಿ ಶ್ರೀಮತಿ ಸೌಮ್ಯಶ್ರೀ ಹಾಗೂ ಕಛೇರಿ ಸಹಾಯಕ ಚಿದಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

whatsapp image 2023 06 22 at 11.52.41 am
whatsapp image 2023 06 22 at 11.52.42 am (1)
whatsapp image 2023 06 22 at 11.52.43 am
Sponsors

Related Articles

Back to top button