ಡಾ|| ಶಾಂತಾ ಪುತ್ತೂರುರವರಿಗೆ ಸ್ವರ್ಣ ಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025…
ಪುತ್ತೂರು: ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಕನ್ನಡ ಭವನ ಗ್ರಂಥಾಲಯ ಕನ್ನಡ ಭವನ ಪ್ರಕಾಶನ ಮತ್ತು ಬಿ. ಶಿವಕುಮಾರ್ ನೇತೃತ್ವದ ಕೋಲಾರದ ಸ್ವರ್ಣ ಭೂಮಿ ಫೌಂಡೇಶನ್ ಜಂಟಿ ಆಶ್ರಯದಲ್ಲಿ ನವೆಂಬರ್ 15 ರಂದು ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ವೇದಿಕೆಯಲ್ಲಿ ನಡೆದ ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಶಿಕ್ಷಣ, ಹಾಗೂ ಸಂಘಟನೆಗಾಗಿ ಡಾ|| ಶಾಂತಾ ಪುತ್ತೂರುರವರಿಗೆ ಸ್ವರ್ಣ ಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ಡಾ|| ಶಾಂತಾ ಪುತ್ತೂರುರವರು 31 ವರ್ಷಗಳಿಂದ ಶಿಕ್ಷಕರಾಗಿಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಕಬಕದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದು ಯೋಗದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಬೊಳುವಾರು ನಿವಾಸಿಯಾಗಿರುವ ಇವರ ಸೌರಭ ಕವನ ಸಂಕಲನ ಲೋಕಾರ್ಪಣೆಗೊಂಡಿದೆ. ಅನೇಕ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದು,ಸಾಹಿತ್ಯ ಕಮ್ಮಟ, ವಿಚಾರಗೋಷ್ಠಿಗಳನ್ನು ನಡೆಸಿರುತ್ತಾರೆ. ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಮಟ್ಟದ ಯೋಗಾಸನ ತೀರ್ಪುಗಾರರು. ಪ್ರಸ್ತುತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರು, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾಸರಗೋಡು ಕರ್ನಾಟಕ ರಾಜ್ಯ ಸಂಚಾಲಕಿ , ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ (ರಿ.) ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರು, ಗೈಡ್ಸ್ ಲಾಂಗ್ ಸರ್ವೀಸ್ ಅವಾರ್ಡ್, ಯೋಗಭೂಷಣ ಪ್ರಶಸ್ತಿ, ಡಾ || ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಶಿಕ್ಷಣ ಸಾಹಿತ್ಯ ಸಂಘಟನೆಗೆ ಗೌರವ ಡಾಕ್ಟರೇಟ್ ಲಭಿಸಿದೆ. ಆಕಾಶವಾಣಿಯಿಂದ ಪ್ರಸಾರವಾಗುವ ವನಿತಾವಾಣಿಯಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ|| ವಾಮನ್ ರಾವ್ ಬೇಕಲ್ ಸಂಸ್ಥಾಪಕರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಮತ್ತು ಸಮೂಹ ಸಂಸ್ಥೆಗಳು , ಶ್ರೀ ಬಿ. ಶಿವಕುಮಾರ್ ಸ್ವರ್ಣ ಭೂಮಿ ಫೌಂಡೇಶನ್ (ರಿ.) ಕೋಲಾರ, ಡಾ|| ಕೆ. ಎನ್. ವೆಂಕಟರಮಣ ಹೊಳ್ಳ ಸಂಚಾಲಕರು ಕೋಲಾರ ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಸಂಭ್ರಮ, ಸಂಧ್ಯಾ ರಾಣಿ ಟೀಚರ್ ಕನ್ನಡ ಭವನ ಸಂಚಾಲಕಿ, ವಿರಾಜ್ ಅಡೂರು ಲೇಖಕರು ಸಾಹಿತಿಗಳು, ವಸಂತ ಕೆರೆಮನೆ ಕಾರ್ಯದರ್ಶಿ ಕನ್ನಡ ಭವನ ರವಿ ನಾಯ್ಕಾಪು ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು, ಪ್ರೊ. ಎ ಶ್ರೀನಾಥ್ ಕಾಸರಗೋಡು, ಬೊಳ್ಳಜಿರ ಅಯ್ಯಪ್ಪ ಅಧ್ಯಕ್ಷರು ಕೊಡಗು ಕನ್ನಡ ಭವನ , ಶ್ರೀಮತಿ ರುಬಿನಾ ಎಂ.ಎ ಅಧ್ಯಕ್ಷರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೊಡಗು ಜಿಲ್ಲೆ , ಶ್ರೀ ಜಯಾನಂದ ಪೆರಾಜೆ ಕೇ.ರಾ.ಕ. ಚು.ಸಾ.ಪ. ಕೇಂದ್ರ ಸಮಿತಿ ಕಾಸರಗೋಡು ಕರ್ನಾಟಕ ರಾಜ್ಯ ಸಂಚಾಲಕರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.





