ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು – ವಾರ್ಷಿಕ ಕ್ರೀಡಾಕೂಟ…

ಮೂಡುಬಿದಿರೆ:ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ, ಮಾಜಿ ಪ್ರಧಾನಿ ಜವಾಹಾರ್ ಲಾಲ್ ನೆಹರು ಜನ್ಮ ದಿನದಂದು ಮಕ್ಕಳ ದಿನಾಚರಣೆ ನ.14 ರಂದು ಸಾವಿರ ಕಂಬ ಬಸದಿ ಪರಿಸರದಲ್ಲಿ ನಡೆಯಿತು. ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯ ಪಟ್ಟಾಚಾರ್ಯ ಮಹಾಸ್ವಾಮಿಜಿಯವರ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಎ ಸುದೀಶ್ ಕುಮಾರ್ ಬೆಟ್ ಕೇರಿ ಮನೆತನ ಇವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳನ್ನು ಕುರಿತು ಮಾತನಾಡುತ್ತಾ ಕ್ರೀಡೆ ಮಕ್ಕಳಲ್ಲಿನ ವಿವಿಧ ರೀತಿಯ ಬೆಳವಣಿಗೆಗೆ ಅವಶ್ಯಕ ಪ್ರತಿಯೊಂದು ಮಗುವಿನಲ್ಲೂ ಬೇರೆ ಬೇರೆ ರೀತಿಯ ಪ್ರತಿಭೆಗಳು ಇರುತ್ತದೆ ಅದನ್ನು ಗುರುತಿಸಿ ಅವರು ಆ ಕ್ಷೇತ್ರದಲ್ಲಿ ಮುನ್ನಡೆಸುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಶ್ರೀ ಸುದೇಶ್ ಕುಮಾರ್ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರುರು. ಇನ್ನೋರ್ವ ಅತಿಥಿಯಾದ ಶ್ರೀ ಪೂರ್ಣಚಂದ್ರ ಜೈನ್, ಉದ್ಯಮಿ ಮೂಡುಬಿದ್ರೆ ಮಾತನಾಡುತ್ತಾ ಮಕ್ಕಳಲ್ಲಿ ಪ್ರಗತಿಯನ್ನು ಸಾಧಿಸಲು ಕ್ರೀಡೆ ಅತ್ಯವಶ್ಯಕ ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳೆರಡು ಬೆಳವಣಿಗೆಯಾಗುತ್ತದೆ ಎಂದರು.
ಪೂಜ್ಯ ಸ್ವಸ್ತಿಶ್ರೀ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅವಶ್ಯವಾಗಿ ಪಾಲ್ಗೊಂಡು ಉತ್ತಮ ವಿದ್ಯಾರ್ಥಿ ಗಳಾಗಿ ಕ್ರೀಡೆಯಲ್ಲಿ ಭಾಗವಹಿಸುದರಿಂದ ಓದಲು ಉತ್ಸಾಹ ಸ್ಫೂರ್ತಿ ಸಿಗುತ್ತದೆ. ತಮ್ಮ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳನ್ನ ಬೆಳೆಸಿಕೊಳ್ಳಲು ಕ್ರೀಡೆ ಅತೀ ಅವಶ್ಯಕ ಎಂದು ನುಡಿದರು. ಪ್ರಾಂಶುಪಾಲ ರಾದ ಶ್ರೀಮತಿ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಜಾತಾ ಇವರು ಧನ್ಯವಾದವಿತ್ತರು. ಬಳಿಕ ವಿವಿಧ ಕ್ರೀಡಾ ಚಟುವಟಿಕೆ ನಡೆಯಿತು.

whatsapp image 2025 11 14 at 6.14.57 pm

Related Articles

Back to top button