ಮಧುರ ರಾಗ…
ಮಧುರ ರಾಗ…
ನಿನ್ನ ಜೊತೆಗೆ ಇದ್ದ ಕ್ಷಣವು
ಜೀವ ಭಾವ ತಳೆಯಿತು
ಒಂದು ಕ್ಷಣವು ಅಗಲದಂತೆ
ಮನವ ಹಿಡಿದು ನಿಲಿಸಿತು
ನಿನ್ನನಗಲಿ ಹೋಗದಂತೆ
ಮನವು ಹಠವ ಹಿಡಿಯಿತು
ಕಣ್ಣಿನಲ್ಲೇ ನಿನ್ನ ಸವಿಯ
ತುಂಬಿಕೊಳಲು ಹೇಳಿತು
ನೀನು ನುಡಿದ ಮಾತುಗಳಲಿ
ಸುಖದ ಲೋಕ ತೋರಿತು
ನನ್ನ ಶ್ರುತಿಯು ನಿನ್ನ ಬೆರೆತು
ಮಧುರ ರಾಗ ಹಾಡಿತು
ಮತ್ತೆ ಮತ್ತೆ ಹಾಡು ಗುನುಗಿ
ತನುವುಯೆಲ್ಲಾ ನಲಿಯಿತು
ದೇಹಭಾವ ಮರೆತು ಹೋಗಿ
ಕಾಲ ಚಲನೆ ನಿಂತಿತು
ಡಾ. ವೀಣಾ ಎನ್ ಸುಳ್ಯ
Sponsors