ಪಿ. ಎ ಕಾಲೇಜಿನಲ್ಲಿ ವಿದ್ಯಾರ್ಥಿವೇತನಕ್ಕಾಗಿ “ಪೇಸ್ ಟೆಸ್ಟ್” ಆ್ಯಪ್…
ಮಂಗಳೂರು: ಪಿ. ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮಂಗಳೂರು ಇದರ ನವೀಕರಿಸಿದ ವೆಬ್ ಸೈಟ್ ಮತ್ತು “ಪೇಸ್ ಟೆಸ್ಟ್” ಆ್ಯಪ್ ನ ಅನಾವರಣ ಕಾರ್ಯಕ್ರಮ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆಯಿತು.
ಪೇಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಪಿ. ಎ ಇಬ್ರಾಹಿಂ ತನ್ನ ದುಬೈ ಕಚೇರಿಯಿಂದ ಆನ್ ಲೈನ್ ಮೂಲಕ ನವೀಕರಿಸಿದ ವೆಬ್ ಸೈಟ್ ನ ಉದ್ಘಾಟನೆ ನಡೆಸಿ ಮಾತನಾಡುತ್ತ NEP 2020 ಗೆ ಹೊಂದಿಕೊಳ್ಳುವ ಅವಶ್ಯಕತೆಗಳನ್ನು ಪಿ. ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮಂಗಳೂರು ಬಹು ಬೇಗನೆ ಸಾಧಿಸಬೇಕು ಎಂದು ಕರೆ ನೀಡಿದರು.
ಎಂಜಿನಿಯರಿಂಗ್ ಆಕಾಂಕ್ಷಿಗಳು ಆರ್ಥಿಕ ಸಹಾಯ ಪಡೆಯಲು ಸಹಕಾರಿಯಾದ ” ಪೇಸ್ ಟೆಸ್ಟ್” ಆ್ಯಪ್ ನ ಅನಾವರಣ ಮಾಡಿ ಮಾತನಾಡಿದ ಪೇಸ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಶ್ರೀ ಅಬ್ದುಲ್ಲಾ ಇಬ್ರಾಹಿಂ, ಆರ್ಥಿಕ ಸಮಸ್ಯೆ ಇರುವ ವಿದ್ಯಾರ್ಥಿಗಳು ಪೇಸ್ ಕ್ಯಾಂಪಸ್ ಗೆ ಭೇಟಿ ನೀಡಿ ಈ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದಲ್ಲಿ ಕಾಲೇಜಿನ ಶುಲ್ಕದ ಮೇಲೆ ಶೇಕಡಾ ನೂರರ ವರೆಗೆ ಸ್ಕಾಲರ್ ಷಿಪ್ ಪಡೆಯಬಹುದು ಎಂದು ಘೋಷಿಸಿದರು.
ಪ್ರಾಂಶುಪಾಲರಾದ ಡಾ.ರಮಿಸ್ ಎಮ್. ಕೆ, ಪಿ.ಎ ಎಜುಕೇಶನಲ್ ಟ್ರಸ್ಟ್ ಸಂಸ್ಥೆಗಳ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಸಯ್ಯದ್ ಅಮೀನ್ ಅಹಮ್ಮದ್, ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಜ್ ಜೆ ಹಾಸಿಮ್, ಪಿಎ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಬೋಧನೆ ಮತ್ತು ಬೋಧಕೇತರ, ಬೋಧಕವರ್ಗದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ಎಂ ಸ್ವಾಗತಿಸಿ. ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್ ಎನ್ ಧನ್ಯವಾದ ಸಮರ್ಪಿಸಿದರು. ಪ್ರೊ. ಚಂದನ ಬಿ ಆರ್ ಕಾರ್ಯಕ್ರಮ ನಿರೂಪಿಸಿದರು.