ಶಿವರಂಜನಿ ಕಲಾ ಕೇಂದ್ರ ಬೊಕ್ಕಸ -ವಾರ್ಷಿಕೋತ್ಸವ…

ಬಂಟ್ವಾಳ: ಶಿವರಂಜನಿ ಕಲಾ ಕೇಂದ್ರ ಬೊಕ್ಕಸ ಪೊಳಲಿ ಸಜೀಪ ಮುನ್ನೂರು ಗ್ರಾಮ ಇದರ ವಾರ್ಷಿಕೋತ್ಸವ ನ. 24 ರಂದು ಜರಗಿತು.
ವಿದ್ಯಾರ್ಥಿಗಳಿಂದ 23 ಬಗೆಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ನ್ಯಾಯವಾದಿಗಳು ಹರಿದಾಸರು ಶಂ ನಾ ಅಡಿಗ ಕುಂಬಳೆ, ಸಂಗೀತ ಗುರುಗಳಾದ ಸುಬ್ಬರಾವ್ ಪಿ, ಕಲಾ ಕೇಂದ್ರದ ಸಂಚಾಲಕಿ ಶಾರದಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Related Articles