ಬೂತ್ ಮಟ್ಟದ ಮತದಾರ ಸಂಪರ್ಕ ಅಭಿಯಾನ…
ಅರಂತೋಡು ಗ್ರಾಮದ 45 ಮನೆಗೆ ಭೇಟಿ ನೀಡಿ ಟಿ ಎಂ ಶಾಹಿದ್ ತೆಕ್ಕಿಲ್ ಚಾಲನೆ…
ಸುಳ್ಯ: ಅರಂತೋಡು ಗ್ರಾಮದ ಬೂತ್ ನಂಬ್ರ 216 ರಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಹಾಗೂ ಮನವಿ ಪತ್ರ ಮನೆ ಮನೆ ತಲುಪಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಮುಖ್ಯ ವಕ್ತಾರ ಹಾಗೂ ಕೆಪಿಸಿಸಿ ಬೆಳ್ತಂಗಡಿ ವಿಧಾನಸಭಾ ಕೆಪಿಸಿಸಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಉಳುವಾರು ಪುರುಷೋತ್ತಮ ಗೌಡ, ಶ್ರೀಮತಿ ಭಾರತಿಯವರಿಗೆ ನೀಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಜು ಅರಂತೋಡು,ಝುಬೈರ್ ಎಸ್ ಇ, ಮುಝಮ್ಮಿಲ್ ಅರಂತೋಡು, ಆಶೀಕ್ ಕುಕ್ಕುಂಬಳ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೆ 45 ಮನೆಗಳಿಗೆ ಭೇಟಿ ನೀಡಲಾಯಿತು.
ಕಾಂಗ್ರೆಸ್ ಸರಕಾರ ಬರುವುದು ಗ್ಯಾರಂಟಿ ಆಗಿದ್ದು, ಮುಂದಿನ ದಿನಗಳಲ್ಲಿ ಉಚಿತ ಕರೆಂಟ್ ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಗ್ಗೆ ಮತದಾರರಿಗೆ ಅವರು ವಿವರಿಸಿದರು.
ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಸಹಿ ಇರುವ ಗ್ಯಾರಂಟಿ ಕಾರ್ಡ್ ಮತ್ತು ಸುಳ್ಯದ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ ಅವರ ಮನವಿ ಪತ್ರ ವಿತರಿಸಲಾಯಿತು. ಸುಳ್ಯದಲ್ಲಿ ಶಾಸಕರಾಗಿ ಜಿ ಕೃಷ್ಣಪ್ಪ ರಾಮಕುಂಜ ಆಯ್ಕೆ ಆಗುತ್ತಾರೆ. ಸಂಪಾಜೆ ಗ್ರಾಮದಲ್ಲಿ ಮಾಡಿದಂತೆ ಅರಂತೋಡಿನ ಅಭಿವೃದ್ಧಿಗೆ ಹತ್ತು ಕೋಟಿಯ ಗ್ರಾಮೀಣ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಅಭಿವೃದ್ಧಿ ಕೆಲಸ ಪಕ್ಷದ ನಾಯಕರ ಸಹಕಾರದೊಂದಿಗೆ ಮಾಡಿಸುತ್ತೇನೆ ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಭರವಸೆ ನೀಡಿದರು.