ಎಪಿ ಉಸ್ತಾದ್ ಗೆ ಯುಎಇ ಗೋಲ್ಡನ್ ವೀಸಾ – ಕೆಸಿಎಫ್ ಒಮಾನ್ ಅಭಿನಂದನೆ…
ಒಮಾನ್: ಭಾರತದ ಗ್ರ್ಯಾಂಡ್ ಮುಫ್ತಿ ಮತ್ತು ಜಾಮಿಯಾ ಮರ್ಕಝ್ ಚಾನ್ಸೆಲರ್ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಯುಎಇ ಸರ್ಕಾರ 10 ವರ್ಷಗಳ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ದುಬೈ ನಿವಾಸ ಮತ್ತು ವಲಸೆ ಇಲಾಖೆ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಗೋಲ್ಡನ್ ವೀಸಾ ಪಡೆದರು. ಯುಎಇ ಮತ್ತು ಜಾಮಿಯಾ ಮರ್ಕಝ್ ನಡುವೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಂಬಂಧಗಳು ಹಾಗೂ ಶೈಕ್ಷಣಿಕ ವಿನಿಮಯ ಮತ್ತು ದತ್ತಿ ಚಟುವಟಿಕೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಶಿಕ್ಷಣ ಮತ್ತು ದತ್ತಿ ಚಟುವಟಿಕೆಗಳಿಗಾಗಿ ಭಾರತದಿಂದ ಗೋಲ್ಡನ್ ವೀಸಾ ಪಡೆದ ಮೊದಲ ವ್ಯಕ್ತಿಯಾಗಿರುವ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದ್ ರವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆಯನ್ನು ತಿಳಿಸಿದೆ.