ಸುಷ್ಮ ವಿ ಅವರಿಗೆ ಪಿಎಚ್.ಡಿ ಪದವಿ…

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗದ ಉಪನ್ಯಾಸಕಿ ಸುಷ್ಮ ವಿ ಅವರು ಪಿಎಚ್.ಡಿ ಪದವಿ ಪಡೆದಿದ್ದಾರೆ.
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗದ ಪ್ರಾಧ್ಯಾಪಕಿ ಸುಷ್ಮ ವಿ ಅವರ “ಸ್ಕಿಲ್ ಅಸೆಸ್ಮೆಂಟ್ ಫಾರ್ ಮ್ಯಾನೇಜ್ಮೆಂಟ್ ಸ್ಟೂಡೆಂಟ್ಸ್ ಟು ಎನ್ಹಾನ್ಸ್ ದೇಯರ್ ಎಂಪ್ಲಾಯಬಿಲಿಟಿ, ಅ ಕಂಪ್ಯಾರಟಿವ್ ಸ್ಟಡಿ’ ಎಂಬ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನುನೀಡಿದೆ.
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ನ ಎಂಬಿಎ ಪ್ರೋಗ್ರಾಂ ಪ್ರೊಫೆಸರ್ ಮತ್ತು ನಿರ್ದೇಶಕಿ ಡಾ.ವಿಶಾಲ್ ಸಮರ್ಥ ಅವರ ಮಾರ್ಗದರ್ಶನದಲ್ಲಿ ಅವರು ಡಾಕ್ಟರೇಟ್ ಅಧ್ಯಯನ ಮಾಡಿದ್ದಾರೆ.
ಬಾಶ್ ಮತ್ತು ಭಾರತ ಸರ್ಕಾರದ ಸ್ಕಿಲ್ ಇಂಡಿಯಾದಿಂದ ಪ್ರಮಾಣೀಕೃತ ಮಾಸ್ಟರ್ ಸ್ಕಿಲ್ಸ್ ತರಬೇತುದಾರರಾಗಿದ್ದಾರೆ ಮತ್ತು ಸಹ್ಯಾದ್ರಿ ಎಚ್ಆರ್ ಸೊಲ್ಯೂಷನ್ಸ್ ಎಲ್ಎಲ್ಪಿಯ ಸ್ಥಾಪಕರಾಗಿದ್ದಾರೆ. ಶ್ರೀ ವಿ ಸುರೇಶ್ ಕುಮಾರ್ ಮತ್ತು ಮಿಥಾ ದಂಪತಿಯ ಪುತ್ರಿಯಾಗಿರುವ ಸುಷ್ಮ ವಿ ಅವರು ಮಂಗಳೂರಿನ ಏಸ್ ಪ್ರಮೋಟರ್ಸ್ & ಡೆವಲಪರ್ಸ್ ನ ಬಿಸಿನೆಸ್ ಡೆವಲಪ್ ಮೆಂಟ್ ಮ್ಯಾನೇಜರ್ ಕಣ್ಣನ್ ನಾಯರ್ ಅವರ ಪತ್ನಿ.

Related Articles

Back to top button