ತೆಕ್ಕಿಲ್ ಪ್ರತಿಷ್ಠಾನಕ್ಕೆ ಭವ್ಯ ನರಸಿಂಹಮೂರ್ತಿ ಭೇಟಿ…

ಸುಳ್ಯ: ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತೆ ಕುಮಾರಿ ಭವ್ಯ ನರಸಿಂಹಮೂರ್ತಿ ಅವರನ್ನು ಪ್ರತಿಷ್ಠಾನದ ಅಧ್ಯಕ್ಷರು, ಕೆಪಿಸಿಸಿ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಪ್ರಹ್ಲಾದ್, ಉನೈಸ್,ತಾಜುದ್ದಿನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯವೈಖರಿ, ಟಿ ಎಂ ಶಾಹಿದ್ ತೆಕ್ಕಿಲ್ ಅವರ ಸಮಾಜ ಸೇವೆಯನ್ನು, ರಾಜಕೀಯ, ಧಾರ್ಮಿಕ, ಶಿಕ್ಷಣ, ಚಟುವಟಿಕೆಗಳ ಬಗ್ಗೆ ಭವ್ಯ ನರಸಿಂಹಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
