ಪಂಚವಾದ್ಯ ತರಬೇತಿ ಸಮಾರೋಪ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪಮುನ್ನೂರು ಇಲ್ಲಿ ಪಂಚವಾದ್ಯಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ ವಹಿಸಿದ್ದರು. ತರಬೇತಿದಾರ ಅಮ್ಮೆಂಬಳ ಸುಂದರ ದೇವಾಡಿಗ ಇವರನ್ನು ಶಾಲುಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಸನ್ಮಾನಿಸಿ ಶುಭಹಾರೈಸಿದರು. ಶಿಕ್ಷಕರಾದ ತಿರುಮಲೇಶ್ವರ ರಾವ್, ಧನೇಶ್ವರ ರಾವ್ ಶುಭ ಹಾರೈಸಿದರು. ಕೃಷ್ಣಭಟ್, ಎಂ. ಕೆ ಶಿವ, ಹರಿ ಪ್ರಸಾದ್ ಭಂಡಾರಿ, ದೇವಪ್ಪ ಮಡಿವಾಳ, ಚಿತ್ರ, ಶ್ರೀನಿವಾಸ್ ನಾಯಕ್, ರಾಜು ಮೊದಲಾದವರು ಉಪಸ್ಥಿತರಿದ್ದರು.





