ತಿರುಪತಿಯಲ್ಲೊಬ್ಬ ಶ್ರೀಮಂತ ಭಿಕ್ಷುಕ ???…

ತಿರುಮಲ : ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಸನ್ನಿಧಿ ಇರುವ ತಿರುಪತಿಯಲ್ಲಿ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.
ತಿರುಪತಿಯ ಶೇಷಾಚಲ ನಗರದ ನಿವಾಸಿಯಾದ ಈತ ತಿರುಪತಿಗೆ ಬರುತ್ತಿದ್ದ ವಿಐಪಿಗಳ ಬಳಿ ಭಿಕ್ಷೆ ಬೇಡುತ್ತಿದ್ದ. ಈತನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯನ್ನು ಮಂಜೂರು ಮಾಡಲಾಗಿತ್ತು. ಆದರೆ ಶ್ರೀನಿವಾಸನ್‌ ಅನಾರೋಗ್ಯದಿಂದಾಗಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಆತನಿಗೆ ಯಾವುದೇ ಕುಟುಂಬ ಸದಸ್ಯರು ಇಲ್ಲದಿರುವುದಿಂದ ಟಿಟಿಡಿ ಅಧಿಕಾರಿಗಳು ನಿನ್ನೆ ಆತನ ಮನೆಯನ್ನು ಪರಿಶೀಲನೆ ನಡೆಸಿದಾಗ ಎರಡು ಟ್ರಂಕ್ ಬಾಕ್ಸ್‌ ಪತ್ತೆಯಾಗಿದ್ದು, ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಸಹ ಪತ್ತೆಯಾಗಿವೆ. ನೋಟುಗಳನ್ನು ಎಣಿಸಿದಾಗ ಅದರಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಸಿಕ್ಕಿದೆ ಎನ್ನಲಾಗಿದೆ.

Sponsors

Related Articles

Back to top button