ಪೂರ್ಣಾವತಾರಿಯೇ…

ಪೂರ್ಣಾವತಾರಿಯೇ…
ಕರುಣಾಳು ಕೃಷ್ಣನೇ
ದಯೆತೋರು ನೀ
ಗುರುವಾಯುರಪ್ಪನೇ
ಕೃಪೆತೋರು ನೀ ||
ಭವ ಭಯನಾಶನೇ
ಗುರುವಂತೆ ಸಲಹುವೆ
ರಕ್ಷಣೆಯ ಮಾಡುತಾ
ತಂದೆಯೇ ಆಗುವೆ ||
ನಿನ್ನನು ಕಾಣುತಾ
ಕಣ್ಣದು ತುಂಬಲು
ಮನಸಿನ ತಮವದು
ಕರಗುತ ಹೋಯಿತು ||
ಪೂರ್ಣಾವತಾರಿಯೇ
ಬಾಲಕೃಷ್ಣನೇ
ಒಲುಮೆಯ ತೋರುತ
ಎಮ್ಮನು ಹರಸು
ರಚನೆ:ಡಾ .ವೀಣಾ ಎನ್ ಸುಳ್ಯ
Sponsors