ಕಲ್ಲಡ್ಕ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯ- “ಸ್ವಚ್ಚ ಭಾರತಕ್ಕಾಗಿ ಸ್ವಚ್ಛ ಪರಿಸರ” ರಾಷ್ಟ್ರೀಯ ವಿಚಾರ ಸಂಕಿರಣ…

ಬಂಟ್ವಾಳ:ಮನೆ,ಕುಟುಂಬ,ಶಾಲೆಗಳ ಪರಿಸರದಲ್ಲಿ ಬದಲಾವಣೆ ಮಾಡುವ ಮೂಲಕ ಜೀವನ ಶೈಲಿಯನ್ನು ರೂಪಿಸಿಕೊಳ್ಳುವುದರಿಂದ ಸ್ವಚ್ಚ ಪರಿಸರವನ್ನು ಕಾಯ್ದು ಕೊಳ್ಳಬೇಕಾಗಿದೆ ಎಂದು ಪ್ರಕೃತಿಸ್ನೇಹಿ ಚಿಂತಕಿ ,ಅದಮ್ಯ ಚೇತನ ಫೌಂಡೇಶನ್ ಬೆಂಗಳೂರಿನ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸ್ವಚ್ಚ ಭಾರತಕ್ಕಾಗಿ ಸ್ವಚ್ಛ ಪರಿಸರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮರು ಬಳಕೆಯ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ತ್ಯಾಜ್ಯ ವಸ್ತುಗಳನ್ನು ಪ್ರಮಾಣವನ್ನು ನಿಯಂತ್ರಿಸಬಹುದು.ತಾಯಂದಿರು ಅಡುಗೆ ಮನೆಯಲ್ಲಿ ತ್ಯಾಜ್ಯ ವಸ್ತುಗಳಿನ್ನು ಕಡಿಮೆಮಾಡುವ ನಿರ್ಣಯ ಕೈಗೊಳ್ಳಬೇಕು.ಮರು ಉತ್ಪಾದನೆಯ ಮಾಡುವ ಇಂಧನಗಳ ಬಳಕೆಯಾಗಬೇಕು ಎಂದು ತೇಜಸ್ವಿನಿ ಆಗ್ರಹಿಸಿದರು. ಪ್ರತಿಯೊಬ್ಬನೂ ನಾನೇನು ಬದಲಾವಣೆ ಮಾಡಬಹುದು ಎಂದು ಯೋಚಿಸಿ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ಬೆಂಗಳೂರಿನಲ್ಲಿ ಅದಮ್ಯ ಚೇತನ ಸಂಸ್ಥೆಯ ಮೂಲಕ ಹಲವು ಪರಿಸರಪೂರಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.ಪರಿಸರ ಉಳಿದರೆ ನಾವು ಉಳಿಯುತ್ತೇವೆ.ಪರಿಸರವನ್ನು ಉಳಿಸುವ ಮೂಲನಂಬಿಕೆಗಳನ್ನು ಜಾಗೃತಗೊಳಿಸುವ ಹಿನ್ನೆಲೆ ಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಯೋಜಿಸಲಾಗಿದೆ ಎಂದರು.

ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷ ತೆವಹಿಸಿದ್ದರು.
ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಬಳಿಕ ಅಗ್ನಿಹೋತ್ರಕ್ಕೆ ಅಗ್ನಿಸ್ಪರ್ಶ ,ಘೃತಾಹುತಿ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ನಡೆದ ಪ್ರಥಮಗೋಷ್ಟಿಯಲ್ಲಿ ಪರಿಸರ ಚಿಂತಕ ಶಿವಾನಂದ ಕಳವೆಯವರು ಪರಿಸರ ಮತ್ತು ಮರ – ಜಾಗೃತಿಯ ದೇಸಿ ದಾರಿಯ ಕುರಿತು ಸ್ವಾನುಭವಗಳ ವಿಚಾರ ಮಂಡಿಸಿದರು.ಎರಡನೇ ಗೋಷ್ಠಿಯಲ್ಲಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪುತ್ತೂರಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ನರೇಂದ್ರ ರೈ ದೇರ್ಲ ಅವರು ಆರಾಧನೆ ಮತ್ತು ನಂಬಿಕೆಗಳಲ್ಲಿ ಪರಿಸರ ಉಳಿವಿನ ದೃಷ್ಟಿ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಅಪರಾಹ್ನ ಸಮಗ್ರ ತ್ಯಾಜ್ಯ ನಿರವಹಣೆಯ ವಿವಿಧ ಆಯಾಮಗಳ ಬಗ್ಗೆ ಕರ್ನಾಟಕ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಕ.ಆರ್.ಹರ್ಷ ಮಾತನಾಡಿದರು.
ಮಣ್ಣು ಮತ್ತು ಆಹಾರ ವಿಷಯುಕ್ತವಾಗುವತ್ತ ಮಾತನಾಡಿ ಭಾರತೀಯ ಆಹಾರ ಪರಂಪರೆಯ ಮಹತ್ವವನ್ನು ತಿಳಿಸಿದರು.
ಪರ್ಯಾವರಣ ಸಂರಕ್ಷಣ ಗತಿವಿಧಿ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ ವಿಚಾರ ಮಂಡಿಸಿದರು.
ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಕೃಷ್ಣ ಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿದರು.ಸಂಸ್ಥೆಯ ಪ್ರಮುಖರಾದ ರಮೇಶ ಎನ್.,ಡಾ.ಕಮಲಾ ಪ್ರಭಾಕರ ಭಟ್ ,ಮಾಜಿ ಶಾಸಕ ,ಪದ್ಮನಾಭ ಉಪನ್ಯಾಸಕ ಯತಿರಾಜ ಪೆರಾಜೆ ನಿರ್ವಹಿಸಿದರು.ವಿದ್ಯಾರ್ಥಿನಿ ಪ್ರತೀಕ ವಂದಿಸಿದರು. ,ವಿದ್ಯಾರ್ಥಿಗಳಿಂದ ಪರಿಸರದ ಕುರಿತು ವಸ್ತು ಪ್ರದರ್ಶನ ನಡೆಯಿತು. 50 ವಿದ್ಯಾಸಂಸ್ಥೆ ಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.

whatsapp image 2024 06 01 at 7.47.10 pm

Sponsors

Related Articles

Back to top button