ಮೇಲ್ಕಾರಿನಲ್ಲಿ ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ- ಸ್ವಂತ ಕಟ್ಟಡದಲ್ಲಿ ನೂತನ ಕಚೇರಿ ಆರಂಭ….
ಬಂಟ್ವಾಳ : ಜನರಿಂದ ಜನರಿಗೋಸ್ಕರ ಜನರ ಜೊತೆಯೇ ಇರುವ ವಿಶಿಷ್ಟವಾದ ಸಂಸ್ಥೆ ಸಹಕಾರಿ ಕ್ಷೇತ್ರ. ಸಹಕಾರಿ ಕ್ಷೇತ್ರದಿಂದ ಸಹಕಾರಿ ರಂಗದಲ್ಲಿ ಅದ್ಭುತ ಬದಲಾವಣೆ ಆಗಿದೆ. ಆಡಳಿತ ಮಂಡಳಿ, ಸಿಬಂದಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಗ್ರಾಮಹಕರಿಗೆ ಉತ್ತಮ ಸೇವೆ ಸಿಗಲು ಸಾಧ್ಯ. ಸಹಕಾರಿ ಕ್ಷೇತ್ರವು, ತನ್ನ ಪರಿಸರದ ಅಭಿವೃದ್ದಿಗೂ ಕಾರಣ ಆಗುತ್ತದೆ. ಜನ ಸಾಮಾನ್ಯರ ಅವಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡಿದ್ದರಿಂದ ಜನಪರವಾಗಿ ಬೆಳೆದಿದೆ. ಸಹಕಾರಿ ಸಂಸ್ಥೆಯು ತಾನು ಬೆಳೆಯುವ ಜೊತೆಗೆ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಹೇಳಿದರು.
ಅವರು ಮೆಲ್ಕಾರ್ ಶ್ರೀರಾಮ್‍ದೇವ್ ಕಾಂಪ್ಲೆಕ್ಸ್‍ನಲ್ಲಿ ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿ. ಸ್ವಂತ ಕಟ್ಟಡದಲ್ಲಿ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.