ಸಂಪಾಜೆಯಲ್ಲಿ ಸಚಿವ ಯು.ಟಿ. ಖಾದರ್‌ಗೆ ಭವ್ಯ ಸ್ವಾಗತ ಹಾಗೂ ಸನ್ಮಾನ…

ಸಂಪಾಜೆ: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರಿಗೆ ಸಂಪಾಜೆಯಲ್ಲಿ ಇಂದು ಸ್ಥಳೀಯ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರಿಂದ ಭವ್ಯ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಇದರ ಅಧ್ಯಕ್ಷರ ಟಿ.ಎಂ. ಶಹೀದ್ ತೆಕ್ಕಿಲ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಅವರ ನೇತ್ರತ್ವದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಯು.ಟಿ. ಖಾದರ್ ಅವರನ್ನು ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅತ್ಯಂತ ಸಡಗರದಿಂದ ಬರಮಾಡಿಕೊಂಡರು.ಕಾರ್ಯಕ್ರಮದಲ್ಲಿ ಸಚಿವರಿಗೆ ಶಾಲ ಹೊದಿಸಿ, ಹಾರ ಹಾಕಿ ಸಾಂಪ್ರದಾಯಿಕವಾಗಿ ಗೌರವಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ ಹನೀಫ್, ಗ್ರಾ. ಪಂ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಸುಮತಿ ಶಕ್ತಿವೇಲ್, ಸಲೀಂ ಪೆರುಂಗೋಡಿ, ಸಿದ್ದೀಕ್ ಕೊಕೊ, ಮುಹಮ್ಮದ್ ಕುಞಿ ಗೂನಡ್ಕ, ಶಾಹಿದ್ ಪಾರೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂದರಿ ಮುಂಡಡ್ಕ, ಪಂಚಾಯತ್ ಸದಸ್ಯರಾದ ವಿಮಲ ಪ್ರಸಾದ್, ಯೂತ್ ಕಾಂಗ್ರೆಸ್ ಕಾರ್ಯದರ್ಶಿ ರಕ್ಷಿತ್, ವಿಜಯ ಕುಮಾರ, ತಾಜ್ ಮುಹಮ್ಮದ್ ಸಂಪಾಜೆ, ಎ.ಕೆ ಇಬ್ರಾಹಿಂ, ಲೂಕಸ್ ಟಿ.ಐ, ದಿನಕರ ಗೌಡ ಸಣ್ಣಮನೆ, ಎಸ್.ಪಿ ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.





