ಬೆಳ್ತಂಗಡಿ – ಲಾರಿ, ಸ್ಕೂಟರ್ ಅಪಘಾತ ;ಸ್ಕೂಟರ್ ಸವಾರ ಸಾವು…

ಬೆಳ್ತಂಗಡಿ: ಲಾರಿ- ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಡಂಗಡಿ ಗ್ರಾಮದ ಬದ್ಯಾರು ಬಳಿ ನಡೆದಿದೆ.
ಮೃತ ಸ್ಕೂಟರ್ ಚಾಲಕನನ್ನು ಗರ್ಡಾಡಿ ನಿವಾಸಿ ಗಿರೀಶ್ ಮೂಲ್ಯ ಎಂದು ಗುರುತಿಸಲಾಗಿದೆ. ಲಾರಿಯು ಅಳದಂಗಡಿ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಸ್ಕೂಟರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಸ್ಕೂಟರ್ ಚಾಲಕ ಲಾರಿಯ ಅಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.