ದೇವಸ್ಯಪಡೂರು ಸರಕಾರಿ ಶಾಲೆ- ವಿಶ್ವ ಪರಿಸರ ದಿನಾಚರಣೆ…

ಬಂಟ್ವಾಳ:ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಡುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಗೊಳ್ಳಬೇಕು. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನು ಮೂಡುವಂತೆ ಮಾಡುವುದರಿಂದ ಸ್ವಚ್ಛ ಪರಿಸರವನ್ನು ಕಾಪಾಡಬಹುದು ಎಂದು ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಸೀನಿಯರ್ ಆದಿರಾಜ ಜೈನ್ ಹೇಳಿದರು.
ಅವರು ದೇವಸ್ಯಪಡೂರು ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಪರಿಸರದಲ್ಲಿ ಹಲಸು, ಸಾಗುವನಿ, ಮೆಕೆಡೆಮಿಯ ಗಿಡಗಳನ್ನು ನೆಡಲಾಯಿತು.
ಸೀನಿಯರ್ ಛೇಂಬರ್ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ , ಉಪಾಧ್ಯಕ್ಷೆ ನ್ಯಾಯವಾದಿ ಶೈಲಜಾ ರಾಜೇಶ್, ಕೃಷಿಕರಾದ ಸಂಪತ್ ಕುಮಾರ್, ಪುಷ್ಪರಾಜ, ಶಾಂತಿಪ್ರಸಾದ್, ಶ್ರೇಯಾಂಶ ಜೈನ್ ಅಟ್ಲಬೆಟ್ಟು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಗೀತಾ ವಂದಿಸಿದರು.

photo 2

image 3

Sponsors

Related Articles

Back to top button