ಮಾರ್ಚ್ 22: ಆಕಾಶವಾಣಿಯಲ್ಲಿ ಯಕ್ಷಗಾನ…
' ಚಕ್ರ ರತ್ನ ' ಎರಡು ಭಾಗಗಳಲ್ಲಿ ಪ್ರಸಾರ...
ಮಂಗಳೂರು: ಕವಿ ರತ್ನಾಕರವರ್ಣಿಯ ‘ಭರತೇಶ ವೈಭವ’ ಕಾವ್ಯವನ್ನಾಧರಿಸಿ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಯಕ್ಷಗಾನ ಪ್ರಸಂಗವು ‘ಚಕ್ರ ರತ್ನ’ ಎಂಬ ಶೀರ್ಷಿಕೆಯಲ್ಲಿ ಮಂಗಳೂರು ಆಕಾಶವಾಣಿಯಿಂದ ಎರಡು ಭಾಗಗಳಾಗಿ ಮೂಡಿ ಬರಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಭಾಗವಹಿಸಿರುವ ಈ ಯಕ್ಷಗಾನ ತಾಳಮದ್ದಳೆಯ ಮೊದಲನೇ ಭಾಗ ‘ಭರತೇಶ ವಿಜಯ’ 2024 ಮಾರ್ಚ್ 22 ಶುಕ್ರವಾರದಂದು ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ.
ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ (ಭರತ), ಗಣರಾಜ ಕುಂಬ್ಳೆ (ಬಾಹುಬಲಿ), ಎಂ.ಕೆ.ರಮೇಶಾಚಾರ್ಯ (ದಕ್ಷಿಣಾಂಕ), ರಮೇಶ ಸಾಲ್ವಣ್ಕರ್ (ಮಾಗಧಾಮರ) ಹಾಗೂ ಉಮೇಶಾಚಾರ್ಯ ಗೇರುಕಟ್ಟೆ (ಬುದ್ಧಿಸಾಗರ) ಪಾತ್ರ ವಹಿಸಲಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದ್ದಾರೆ.
ಮಾ.29 ‘ಬಾಹುಬಲಿ ವಿಜಯ’:
ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್ ಪಿ.ಎಸ್. ನಿರ್ಮಿಸಿ ಬಾನುಲಿ ಪ್ರಸಾರಕ್ಕೆ ಸಿದ್ಧಪಡಿಸಿದ್ದಾರೆ. ಚೈತನ್ಯ ಪ್ರಸಾದ್ ಧ್ವನಿಮುದ್ರಣದಲ್ಲಿಸಹಕರಿಸಿದ್ದಾರೆ.
ಕಾರ್ಯಕ್ರಮದ ಎರಡನೇ ಭಾಗ ‘ಬಾಹುಬಲಿ ವಿಜಯ’ ಮುಂದಿನ ಶುಕ್ರವಾರ ಮಾರ್ಚ್ 29ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು ಎಂದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯು ಪ್ರಕಟಣೆಯಲ್ಲಿ ತಿಳಿಸಿದೆ.