ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ – ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ. ಎಂ. ಮುಸ್ತಫ ನೇಮಕ…

ದ. ಕ. ಜಿಲ್ಲೆಯಿಂದ ಏಕೈಕ ಪ್ರಧಾನ ಕಾರ್ಯದರ್ಶಿಯಾಗಿ ಎಐಸಿಸಿ ಅಲ್ಪಸಂಖ್ಯಾತ ವಿಭಾಗದಿಂದ ನೇಮಕಾತಿ ಆದೇಶ...

ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೈನಾರಿಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮೀಫ್ ಉಪಾಧ್ಯಕ್ಷ, ಮಾಜಿ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ ಇವರನ್ನು ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು, ರಾಜ್ಯಸಭಾ ಎಂ. ಪಿ ಇಮ್ರಾನ್ ಪ್ರತಾಪ್ ಘರಿ ಯವರ ಅನುಮೋದನೆ ಯೊಂದಿಗೆ ಎಐಸಿಸಿ ಮೈನಾರಿಟಿ ವಿಭಾಗ ಸಂಯೋಜಕರು, ಕರ್ನಾಟಕ ಉಸ್ತುವಾರಿ ಪದಾಧಿಕಾರಿ ಶ್ರೀಮತಿ ಜೀನಾ. ಎಸ್. ಗಾಲ ರವರು ನೇಮಿಸಿರುತ್ತಾರೆ
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ವಿಧಾನಪರಿಷತ್ ಶಾಸಕರಾದ ಅಬ್ದುಲ್ ಜಬ್ಬಾರ್ ರವರ ಶಿಫಾರಸ್ಸಿ ನಂತೆ ಈ ನೇಮಕಾತಿ ಆಗಿರುತ್ತದೆ.
ಈ ನೇಮಕಾತಿ ಗೆ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಪರಿಷತ್ ಶಾಸಕರು ಆದ ಹರೀಶ್ ಕುಮಾರ್, ಸುಳ್ಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಪಿ. ಸಿ. ಜಯರಾo ರವರಿಗೆ ಕೆ. ಎಂ. ಮುಸ್ತಫ ಕೃತಜ್ಞತೆ ಸಲ್ಲಿಸಿರುತ್ತಾರೆ.
ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ, ಸುಳ್ಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಯ ಉಪ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಸ್ತಫ ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ ಸುಧೀರ್ಘ 25 ವರ್ಷ ಸೇವೆ ಸಲ್ಲಿಸಿ, ಜಿಲ್ಲಾ ಯೋಜನಾ ಸಮಿತಿ, ವಕ್ಫ್ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುತ್ತಾರೆ
ಕಳೆದ ಒಂದು ವರ್ಷದ ಹಿಂದೆ ಇದೇ ಹುದ್ದೆಗೆ ನೇಮಕಾತಿ ಹೊಂದಿದ್ದರೂ ವಿಧಾನಸಭೆ ಚುನಾವಣೆ ನಂತರ ಎಲ್ಲಾ ಸಮಿತಿಗಳನ್ನು ಬರ್ಖಾಸ್ತು ಗೊಳಿಸಲಾಗಿತ್ತು. ಈಗ ಪುನಃ ನೂತನ ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬಂದಿರುತ್ತದೆ.

whatsapp image 2024 03 21 at 12.43.23 pm

Related Articles

Back to top button