ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಮ್ಟಾಡಿಯಲ್ಲಿ ವನಮಹೋತ್ಸವ…

ಬಂಟ್ವಾಳ ಜು.6:ರಾಷ್ಟ್ರೀಯ ವನಮಹೋತ್ಸವ ಆಚರಣೆಯ ಅಂಗವಾಗಿ ಅಮ್ಟಾಡಿ ಬಂಟ್ವಾಳ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಮ್ಟಾಡಿ ಬಂಟ್ವಾಳದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಶಾಲಾವರಣದಲ್ಲಿ ವಿದ್ಯಾರ್ಥಿನಾಯಕರಾದ ಧನ್ವಿತ್ ಮತ್ತು ಪ್ರಣೂಷ್ ಹಣ್ಣಿನ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿ ನಾಯಕರು ಹಾಗೂ ಸ್ಕೌಟ್, ಗೈಡ್ ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಹಾಕಿದರು.
ಹಿರಿಯ ಶಿಕ್ಷಕರಾದ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ಗಿಡಗಳನ್ನು ನೆಡುವ ಅವಶ್ಯಕತೆ ಬಗ್ಗೆ ತಿಳಿಸಿ ಹಸಿರೇ ಉಸಿರು ಎಂಬುದನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಶಾಲೆಗಳಲ್ಲಿ ಮಾಡಬೇಕಾಗಿರುವುದು ಅವಶ್ಯಕ ಎಂದ ಅವರು ಮನೆಯ ಪರಿಸರದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಗಿಡನಟ್ಟು ಪಾಲನೆ ಮಾಡಬೇಕೆಂದರು.
ಶಾಲಾ ಮುಖ್ಯಶಿಕ್ಷಕಿ ಸುಜಾತ ಬಿ.ಸಹ ಮುಖ್ಯಶಿಕ್ಷಕಿ ಹೇಮಲತಾ ,ಮಾಂಟೆಸ್ಸೋರಿ ಮುಖ್ಯಶಿಕ್ಷಕಿ ಸವಿತಾಕಿರಣ್,ಸಹಮುಖ್ಯ ಶಿಕ್ಷಕಿ ನಿಷಾ,ಶಿಕ್ಷಕಿಯಾರಾದ ಪ್ರಿಯಾ,ಶ್ವೇತಾ ಕಿರಣ್,ವಿನಿತಾ ಮೊದಲಾದವರಿದ್ದರು.



