ಅರಂತೋಡು ವಾಹನ ಚಾಲಕ – ಮಾಲಕ ಸಂಘದವರಿಂದ ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿ- ಮನವಿ…
ಸುಳ್ಯ: ಕಳೆದ 35 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವಾಹನ ಚಾಲಕರ ಮಾಲಕ ಸಂಘಕ್ಕೆ ಅರಂತೋಡು ಗ್ರಾಮದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ದೊರಕಿಸಿಕೊಡಲು ಸಂಘದ ಅಧ್ಯಕ್ಷರಾದ ಪ್ರಸನ್ನ ಅಜ್ಜನಗದ್ದೆ, ಕಾರ್ಯದರ್ಶಿ ಗೋವರ್ದನ ಇರ್ಣೆ, ಯತೀಶ್ ಕಟ್ಟಕೋಡಿ,ಅಂಬುಜಾಕ್ಷ ಮತ್ತು ಇತರ ಪದಾಧಿಕಾರಿಗಳು ಕರ್ನಾಟಕ ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಮೊಟ್ಟೆನ್ಗಾರ್ ಹಾಗೂ ಗ್ರಾಮ ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು. ಟಿ.ಎಂ ಶಹೀದ್ ತೆಕ್ಕಿಲ್ ಅವರು ಮನವಿ ಸ್ವೀಕರಿಸಿ ವಾಹನ ಚಾಲಕ ಮಾಲಕ ಸಂಘವನ್ನು ನೋಂದಾಯಿಸಲು ತಿಳಿಸಿ, ತಹಶೀಲ್ದಾರ್ ಮಂಜುಳ ಅವರಲ್ಲಿ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.



