ಆದಿದ್ರಾವಿಡ ಯುವ ವೇದಿಕೆ ಪದಾಧಿಕಾರಿಗಳಿಂದ ಟಿ ಎಂ ಶಾಹೀದ್ ತೆಕ್ಕಿಲ್ ಭೇಟಿ…
ಸುಳ್ಯ: ಸುಳ್ಯ ಪ್ರವಾಸಿ ಮಂದಿರದಲ್ಲಿ ಆದಿದ್ರಾವಿಡ ಯುವ ವೇದಿಕೆ ( ರಿ.) ದ. ಕ. ಜಿಲ್ಲೆ ಇದರ ಪದಾಧಿಕಾರಿಗಳು ಟಿ ಎಂ ಶಾಹೀದ್ ತೆಕ್ಕಿಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇವರನ್ನು ಭೇಟಿ ಮಾಡಿ ಸುಳ್ಯ ತಾಲೂಕು ಕಸಬಾ ಗ್ರಾಮದಲ್ಲಿ ಆದಿದ್ರಾವಿಡ ಯುವ ವೇದಿಕೆಯ ನೂತನ ಸಮುದಾಯ ಭವನ ನಿರ್ಮಿಸಲು ಸರಕಾರದ ವತಿಯಿಂದ ಭೂಮಿಯನ್ನು ಮಂಜೂರು ಮಾಡುವಂತೆ ಮನವಿಯನ್ನು ಸಲ್ಲಿದರು.
ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಹಾಗೂ ಆದಿದ್ರಾವಿಡ ಯುವ ವೇದಿಕೆಯ ಅಧ್ಯಕ್ಷರಾದ ಸುಂದರ, ಕಾರ್ಯದರ್ಶಿ ಸತೀಶ್, ಕೋಶಾಧಿಕಾರಿ ಗೋಪಾಲ ಆರಂಬೂರು, ಉಪಾಧ್ಯಕ್ಷ ಅಶ್ವಿನ್ ಅಜ್ಜಾವರ ಹಾಗೂ ಯೂತ್ ಕಾಂಗ್ರೆಸ್ ಮುಖಂಡ ರಂಜಿತ್ ರೈ ಮೇನಾಲ ಮುಂತಾದವರು ಉಪಸ್ಥಿತರಿದ್ದರು.





