ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಂಪದವು – ಒಂದು ತಿಂಗಳ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ…

ಬಂಟ್ವಾಳ: ಸಜೀಪ ಮಾಗಣೆ ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಂಪದವು ಕ್ಷೇತ್ರದಲ್ಲಿ ಒಂದು ತಿಂಗಳ ಕಾರ್ತಿಕ ದೀಪೋತ್ಸವ ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನ. 14 ರಂದು ವಿದ್ಯುಕ್ತವಾಗಿ ಆರಂಭಿಸಲಾಯಿತು.
ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎಂ ವೆಂಕಟೇಶ್ವರ ಭಟ್, ಪ್ರವೀಣ್ ಆಳ್ವ ಎಂ. ಕೆ. ರಾಧಾಕೃಷ್ಣ ಆಳ್ವ , ಬಿ. ಶಿವರಾಮ ಭಂಡಾರಿ, ಗಡಿ ಪ್ರದಾನರಾದ ಮುಂಡಪ್ಪ ಶೆಟ್ಟಿ, ಪ್ರವೀಣ್ ಶೆಟ್ಟಿ, ಸೋಮನಾಥ ಭಂಡಾರಿ, ಪ್ರದೀಪ್ ರೈ, ಕಿಶನ್ ಶೇಣವ, ಸುಧಾಕರ ಕೆ .ಟಿ, ಪ್ರವೀಣ್ ಬಂಡಾರಿ, ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಭಜನ ಕಾರ್ಯಕ್ರಮ ಹಾಗೂ ಸಾಮೂಹಿಕ ದೀಪಾರಾಧನೆ ಹಮ್ಮಿಕೊಳ್ಳಲಾಗಿತ್ತು.