ಡಿ.20 ,21 : ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ವಾರ್ಷಿಕ ಮಜಿಲಿಸ್ ನ್ನೂರ್ ಹಾಗೂ ಸಮಸ್ತ 100ನೇ ಪ್ರಚಾರ ಸಮ್ಮೇಳನ ಕಾರ್ಯಕ್ರಮ…
ಸುಳ್ಯ: ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ಡಿಸೆಂಬರ್ 20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯುವ 7ನೇ ವಾರ್ಷಿಕ ಮಜಿಲಿಸ್ ನ್ನೂರ್, ಸಮಸ್ತ 100 ನೇ ಪ್ರಚಾರ ಸಮ್ಮೀಳನ ಮತ್ತು 2ದಿನ ಗಳ ಮತ ಪ್ರಭಾಷಣದ ಕಾರ್ಯಕ್ರಮ ನಡೆಯಲಿದೆ.
ಡಿ .20 ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮ ವನ್ನೂ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ವಹಿಸಲಿದ್ದಾರೆ. ಬಹು ಹಾಫಿಝ್ ಮಾಹಿನ್ ಮನ್ನಾನಿ ತಿರುವನಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ . ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ . ಎಂ.ಶಹೀದ್ ತೆಕ್ಕಿಲ್ ಸೇರಿದಂತೆ ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಡಿ 21ರಂದು ಮಜ್ಲಿಸ್ ನ್ನೂರ್ ಹಾಗೂ ಸಮಸ್ತ ನೂರನೇ ವರ್ಷದ ಪ್ರಚಾರ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ.ಮಗ್ರಿಬ್ ನಮಾಜಿನ ಬಳಿಕ ಬಹು ಅಸಯ್ಯಿದ್ ಅಲಿ ತಂಗಲ್ ಕುಂಬೊಳ್ ರವರ ನೇತೃತ್ವದಲ್ಲಿ ಮಜ್ಲಿಸ್ ನ್ನೂರ್ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆ ಯನ್ನು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ಜುಬೇರ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ನಹೀಂ ಫೈಝಿ ನೆರವೇರಿಸಲಿದ್ದಾರೆ. ಮುಖ್ಯ ಭಾಷಣ ವನ್ನು ಉವೈಸ್ ಮದನಿ ಅಲ್ ಅಜ್ಜರಿ ತೋಕೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಜತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಠೇಲ್, ಸೌದಿ ಸಮಿತಿ ಪ್ರತಿನಿಧಿ ಜಾವೇದ್ ಪೆಲ್ತಡ್ಕ, ಇಸಾಕುದ್ಧೀನ್, ದುಬೈ ಸಮಿತಿ ಪ್ರತಿನಿಧಿ ಕೆ.ಎಂ ಅನ್ವಾರ್,ಸೇರಿದಂತೆ ನೆರೆಯ ಮಸೀದಿ ಖತೀಬರು,ಅದ್ಯಕ್ಷರು ಧಾರ್ಮಿಕ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಸಲಾಗಿದೆ.ಕಾರ್ಯಕ್ರಮದ ಕೊನೆಯಲ್ಲಿ ಸಿರಣೆ ವಿತರಣೆ ನಡೆಯಲಿದೆ.





