ಬಹುಮುಖಿ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿದ್ದ ಹಿರಿಯ ಪತ್ರಕರ್ತ, ರಂಗನಿರ್ದೇಶಕ ಆಲದಪದವು ಗೋಪಾಲ ಅಂಚನ್ ಅವರಿಗೆ ಈಗ ಅನಾರೋಗ್ಯದ ಬದುಕು…
ಬಂಟ್ವಾಳ: ಕಳೆದ 35 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಸೃಜನಶೀಲ ವ್ಯಕ್ತಿತ್ವದ ಪ್ರತಿಭಾವಂತ ಗೋಪಾಲ ಅಂಚನ್ ಅವರದು ಈಗ ಅನಾರೋಗ್ಯದ ಬದುಕು.
ತನ್ನ ಸ್ವಂತ ಬದುಕನ್ನು ಲೆಕ್ಕಿಸದೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ ಹಾಗೂ ಸಾಹಿತ್ಯಿಕ ಸೇವೆಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟ ಇವರು ಇದೀಗ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ.
ಗೋಪಾಲ ಅಂಚನ್ ಅವರು ಯಾವುದೇ ಸಂಸ್ಥೆಯಲ್ಲಿ ಮಾಸಿಕ ವೇತನಕ್ಕೆಂದು ದುಡಿಯದೆ ತನ್ನ ಸೇವೆಗಾಗಿ ಕೆಲವು ಸಂಸ್ಥೆಗಳು ಕೊಟ್ಟ ಗೌರವಧನವನ್ನಷ್ಟೇ ಸ್ವೀಕರಿಸಿ ಬದುಕು ನಡೆಸುತ್ತಾ ಜೀವನದುದ್ದಕ್ಕೂ ಆರ್ಥಿಕ ಸಂಕಷ್ಟವನ್ನು ಅನುಭವಿಸಿದವರು.
ಇದೀಗ ಕಳೆದ ಮೂರುವರೆ ವರ್ಷಗಳಿಂದ ಎರಡು
ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳಿಂದ ಇವರ ಅನಾರೋಗ್ಯ ತೀವ್ರಗೊಂಡಿದ್ದು ಮೂರೂವರೆ ವರ್ಷದಿಂದ ಯಾವುದೇ ಉದ್ಯೋಗ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಇದುವರೆಗೆ ಐದಾರು ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಚಿಕಿತ್ಸೆಗಾಗಿ 6 ಲಕ್ಷಕ್ಕೂ ಹೆಚ್ಚು ರೂಪಾಯಿ ಸಾಲ ಮಾಡಿ ವಿನಿಯೋಗಿಸಲಾಗಿದೆ.
ವೃದ್ಧಾಪ್ಯದಲ್ಲಿರುವ ತಂದೆ,ತಾಯಿ, ಹೆಂಡತಿ ಮತ್ತು ವಿದ್ಯಾರ್ಜನೆ ಮಾಡುತ್ತಿರುವ ಇಬ್ಬರು ಮಕ್ಕಳ ಜೀವನಕ್ಕೆ ಇವರೇ ಆಧಾರವಾಗಿದ್ದಾರೆ.
ಇದೀಗ ಮಂಗಳೂರಿನ ಅತ್ತಾವರ ಕೆಎಂಸಿ ಅಸ್ಪತ್ರೆಯ ಚಿಕಿತ್ಸೆ ನಡೆಯುತ್ತಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಇವರಿಂದ ಅಸಾಧ್ಯವಾಗಿದೆ. ಅದ್ದರಿಂದ ಸಹೃದಯಿ ದಾನಿಗಳು ಇವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಹಕರಿಸುವಂತೆ ಗೋಪಾಲ ಅಂಚನ್ ನಿವೇದಿಸಿಕೊಂಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ನಿವಾಸಿಯಾದ ಆಲದಪದವು ಗೋಪಾಲ ಅಂಚನ್ ಅವರು ಹಿರಿಯ ಪತ್ರಕರ್ತರಾಗಿ, ರಂಗನಿರ್ದೇಶಕರಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲೆಡೆ ಚಿರಪರಿಚಿತರು.
ಅಂಚನ್ ಅವರು ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ, ಸಾಂಸ್ಕ್ರತಿಕ-ಸಾಹಿತ್ಯ- ಶೈಕ್ಷಣಿಕ ಕಾರ್ಯಕ್ರಮಗಳ ಸಂಘಟಕನಾಗಿ, ಸಾಮಾಜಿಕ & ಧಾರ್ಮಿಕ ಕ್ಷೇತ್ರಗಳ ಕಾರ್ಯಕರ್ತನಾಗಿ, ತೀರ್ಪುಗಾರನಾಗಿ, ಭಾಷಣಕಾರನಾಗಿ, ಕಾರ್ಯಕ್ರಮ ನಿರೂಪಕನಾಗಿ,
ಎನ್ ಜಿ ಓಗಳ ಕಾರ್ಯಕರ್ತನಾಗಿ, ಜನಪರ ಹೋರಾಟಗಾರನಾಗಿ ಬಹುಮುಖಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜನಮನ್ನಣೆ ಪಡೆದವರು.
ವಿ.ಸೂ: ನೆರವು ನೀಡುವವರು ಗೋಪಾಲ ಅಂಚನ್ ಅವರ ಪತ್ನಿ ಶ್ರೀಮತಿ ಪ್ರತಿಮ ಗೋಪಾಲ ಅಂಚನ್ ಅವರ ಮೊಬೈಲ್ ನಂಬ್ರ 9663582420 ಗೆ ಗೂಗಲ್ ಪೆ. ಮಾಡಬಹುದಾಗಿದೆ.
ಅಥವಾ ಶ್ರೀಮತಿ ಪ್ರತಿಮ ಜಿ.ಅಂಚನ್, ಖಾತೆ ಸಂಖ್ಯೆ:0712500101290801, IFSC Code: KARB0000071, ಕರ್ನಾಟಕ ಬ್ಯಾಂಕ್ ಲಿ. ಬಂಟ್ವಾಳ ಮೂಡ ಶಾಖೆಗೆ ಪಾವತಿಸಬಹುದಾಗಿದೆ.)





