ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ- ವೀರೇಂದ್ರ ಹೆಗ್ಗಡೆ ಯವರಿಂದ ನೆರವು…
ಬಂಟ್ವಾಳ: ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರು ರೂ. 5 ಲಕ್ಷ ನೆರವು ನೀಡಿರುತ್ತಾರೆ.
ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳoಜ ವೆಂಕಟೇಶ್ವರ ಭಟ್ ಅವರಿಗೆ ಚಕ್ ಹಸ್ತಾಂತರಿಸಿದರು .
ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ, ಮೇಲ್ವಿಚಾರಕಿಯರಾದ ಅಮಿತಾ, ಶಕೀಲಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ರಾಧಾಕೃಷ್ಣ ಆಳ್ವ, ಪಂಚಾಯತ್ ಸದಸ್ಯ ವಿಟ್ಟಲ್ ದಾಸ್,ಪ್ರಮುಖರಾದ ಗಣಪತಿ ಭಟ್ , ರಾಮಕೃಷ್ಣ ಭಟ್, ಭಾಸ್ಕರ, ನಿತಿನ್ ಅರಸ, ಹರೀಶ್ ಬಂಗೇರ, ಕೇಶವ ಮೊದಲಾದವರು ಉಪಸ್ಥಿತರಿದ್ದರು.
ತಮ್ಮ ಶಾಸಕರ ನಿಧಿಯಿಂದ ದೇವಾಲಯ ಸಂಪರ್ಕ ರಸ್ತೆಗೆ ಹಾಗೂ ಮುಂಭಾಗದ ತಡೆಗೋಡೆಗೆ ಅನುದಾನ ಒದಗಿಸುವುದಾಗಿ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಭರವಸೆ ನೀಡಿದರು.