ಸಿದ್ದಕಟ್ಟೆ: ಭರತನಾಟ್ಯ-ಸಂಗೀತ ತರಗತಿ ಉದ್ಘಾಟನೆ…

ಸಿದ್ದಕಟ್ಟೆ : ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಸಿದ್ದಕಟ್ಟೆಯಲ್ಲಿ ನಡೆಯುವ ನಿಯೋಜಿತ ಭರತನಾಟ್ಯ-ಸಂಗೀತ ತರಗತಿಗಳನ್ನು ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಇತ್ತೀಚೆಗೆ ಉದ್ಘಾಟಿಸಿದರು.
ಬಹುಮುಖಿ ಸಾಧನೆಗಳನ್ನು ಮಾಡಿರುವ ಅಸದೃಶ ಗುರುಗಳ ಇಲ್ಲಿಗೆ ಲಭ್ಯವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆನೀಡಿ, ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪೂರ್ವಸಚಿವ ಬಿ.ನಾಗರಾಜ ಶೆಟ್ಟಿಯವರು ತನ್ನ ಗುಣಶ್ರೀ ವಿದ್ಯಾಸಂಸ್ಥೆಯ ನೃತ್ಯ -ಸಂಗೀತ ವಿದ್ಯಾರ್ಥಿಗಳ ಶುಲ್ಕವನ್ನು ಟ್ರಸ್ಟ್ ನ ಕಡೆಯಿಂದಲೇ ಭರಿಸುವ ಭರವಸೆ ನೀಡಿದರು.
ಸಂಗಬೆಟ್ಟು ಗ್ರಾ. ಪಂ. ಅಧ್ಯಕ್ಷೆ ರಾಜೀವಿ ಪೂಜಾರಿ ನಾಮಫಲಕ ಅನಾವರಣಗೊಳಿಸಿದರು.
ಸಿದ್ದಕಟ್ಟೆ ಮುಖ್ಯರಸ್ತೆಯ ಫಲ್ಗುಣಿ ವಾಣಿಜ್ಯ ಸಂಕೀರ್ಣದಲ್ಲಿರುವ ನೇತ್ರಾವತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ವಿ|ಶಾರದಾಮಣಿ ಶೇಖರ್ – ಚಂದ್ರಶೇಖರ್ ಕೆ ಶೆಟ್ಟಿ ದಂಪತಿಗೆ ಗುರುವಂದನೆ ಸಲ್ಲಿಸಲಾಯಿತು.
ಶ್ರೀಕ್ಷೇತ್ರ ಪೂಂಜದ ವಿದ್ವಾನ್ ಕೃಷ್ಣಪ್ರಸಾದ್ ಆಚಾರ್ಯ ಮತ್ತು ಪ್ರಕಾಶ್ ಆಚಾರ್ಯ ಶುಭಾಶಂಸನೆಗೈದರು. ಸದ್ದಕಟ್ಟೆ ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಮತ್ತು ಕಟ್ಟಡದ ಮಾಲಕ ದುರ್ಗಾಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ನೃತ್ಯಗುರು, ದೂರದರ್ಶನ ಕಲಾವಿದೆ ವಿ|ಅಯನಾ ವಿ ರಮಣ್ ಪ್ರಾರ್ಥಿಸಿದರು. ಸಂಗೀತ ಗುರು ವಿ|ಕೆ ವಿ ರಮಣ್ ಮಂಗಳೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಹೊಸನದಿ ಗ್ರಾ. ಪಂ. ಪಿಡಿಒ ಗಣೇಶ್ ಶೆಟ್ಟಿ ನಿರೂಪಿಸಿ ವಂದಿಸಿದರು.
80 ಕ್ಕೂ ಅಧಿಕ ನೃತ್ಯ-ಸಂಗೀತ ವಿದ್ಯಾರ್ಥಿಗಳು, ಅವರ ಪಾಲಕರು-ಪೋಷಕರು ಉಪಸ್ಥಿತರಿದ್ದರು.
ನಾಟ್ಯಾಯನ ಕಲಾ ಅಕಾಡೆಮಿಯ ಆಶ್ರಯದಲ್ಲಿ ಪ್ರತೀ ಶನಿವಾರ ಅಪರಾಹ್ನ 3 ರಿಂದ 6 ಗಂಟೆವರೆಗೆ ತಲಾ ಮೂರು ಬ್ಯಾಚ್ ಗಳ ನೃತ್ಯ-ಸಂಗೀತ ತರಗತಿಗಳು ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಚಾಲಕಿ ಡಾ|ಮೂಕಾಂಬಿಕಾ ಜಿ ಎಸ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 8792158946 / 6362973415 ನಂಬರನ್ನು ಸಂಪರ್ಕಿಸಬಹುದಾಗಿದೆ.