ಸರಳ ಇಂಗ್ಲಿಷ್ ಉಚ್ಚರಣಾ ವಿಧಾನ ಕಾರ್ಯಕ್ರಮ…

ಸುಳ್ಯ: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು, ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಸರಳ ಇಂಗ್ಲಿಷ್ ಉಚ್ಚರಣಾ ವಿಧಾನ ಕಾರ್ಯಕ್ರಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸುಸುತ್ರವಾಗಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಆ..22 ರಂದು ನಡೆಯಿತು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ಪಿ ಇವರು ವಹಿಸಿದ್ದರು. ಹಾಗೂ ಉದ್ಘಾಟಕರಾಗಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ IQAC Co- ordinator ಡಾ. ಮಮತಾ ರವರು ಆಗಮಿಸಿದ್ದರು. ಹಾಗೆಯೇ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರಿಮತಿ ಭವ್ಯ ಪಿ ಎಮ್ ಹಾಗೂ ಮುಖ್ಯ ಅಥಿತಿಯಾಗಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರಿಮತಿ ಶೋಭಾ ಎ ಇವರು ಹಾಜರಿದ್ದರು.

ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಶಾಲಾ ವಿದ್ಯಾರ್ಥಿಗಳಿಂದ ನಡೆಯಿತು. ತದ ನಂತರ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಅಧ್ಯಕ್ಷರ ನೆಲೆಯಲ್ಲಿ ಮಾತನಾಡಿದ ಸೋಮಶೇಖರ ಇವರು ಸಮಾಜ ಕಾರ್ಯ ದಂತಹ ಕೋರ್ಸ್ ಬಹಳ ಉತ್ತಮವಾದುದು,ಸಮಾಜದ ಭವಿಷ್ಯ ರೂಪಿಸುವ ಕೆಲಸವನ್ನು ಮಾಡುವಂತಹ ಕೆಲಸ ಮಾಡುತ್ತಾ ಇದ್ದಾರೆ.ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಶಾಲಾ ಮಕ್ಕಳಿಗೆ, ಹಾಗೂ ಸಮಾಜದಲ್ಲಿ ನಡೆಸಿಕೊಡಿ ಎಂದು ಸಮಾಜ ಕಾರ್ಯದ ಮಹತ್ವವನ್ನು ನುಡಿದರು.
ಕಾರ್ಯಕ್ರಮ ದ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆ ಕಾರ್ಯಕ್ರಮದ ಸಂಯೋಜಕ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳಾದ ಜಸ್ವಂತ್ ಎ ಡಿ, ಪ್ರೀತಿಕಾ ಟಿ ಹಾಗೂ ನಿಶ್ಚಿತಾ ಎಮ್ ಸಿ ಇವರಿಂದ ನಡೆಯಿತು.

whatsapp image 2025 08 22 at 3.18.07 pm

Related Articles

Back to top button