ಅರಂತೋಡು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ನಡೆದ ಮಜ್ಲಿಸ್ ನ್ನೂರ್ ಹಾಗೂ ಸಮಸ್ತ 100 ನೇ ವಾರ್ಷಿಕ ಪ್ರಚಾರ ಸಮ್ಮೇಳನ ಸಂಪನ್ನ…

ಸುಳ್ಯ: ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ 7ನೇ ವರ್ಷದ ಮಜ್ಲೀಸ್ ನ್ನೂರ್ ಹಾಗೂ ಸಮಸ್ತ 100 ನೇ ವರ್ಷದ ಪ್ರಚಾರ ಸಮ್ಮೇಳನವು ಡಿ.20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಡಾ| ಕೆ.ಎಂ.ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ ಸಂಪನ್ನ ಗೊಂಡಿತು.
ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ಸಮಾರಂಭವನ್ನು ಉದ್ಘಾಟಿಸಿದರು. ಬಹು| ಹಾಫಿಝ್ ಮಾಹಿನ್ ಮನ್ನಾನಿ ತಿರುವನಂತಪುರ ಮತ ಪ್ರಭಾಷಣ ಗೈದರು. ಮಜ್ಲೀಸ್ ನ್ನೂರ್ ನ ನೇತೃತ್ವವನ್ನು ಅಸ್ಸಯ್ಯರ್ ಆಲಿ ತಂಗಳ್ ಕುಂಬೋಲ್ ರವರು ವಹಿಸಿ, ದುವಾರ್ಶಿವಾಚನ ಮಾಡಿ ಇಸ್ಲಾಂ ನಲ್ಲಿ ನಮಾಜ್ ಕಡ್ಡಾಯವಾಗಿದೆ; ಮುಸ್ಲಿಂ ಆದವನು ಐದು ಹೊತ್ತು ಸಮಯಕ್ಕೆ ಸರಿಯಾಗಿ ನಮಾಜ್ ನಿರ್ವಹಿಸಿದರೆ ಯಾವ ಪಾಪವನ್ನು ಮಾಡಲಾರ ಮತ್ತು ದುಶ್ಚಟಗಳಿಂದ ದೂರ ಇರುತ್ತಾನೆಂದರು.
ಎರಡನೇ ದಿನ ನಡೆದ ಸಮರೋಪ ಸಮಾರಂಭದ ಉದ್ಘಾಟನೆಯನ್ನು ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಖತೀಬರಾದ ಬಹು| ನಈಂ ಫೈಝಿ ಉದ್ಘಾಟಿಸಿದರು. ಸದರ್ ಅಶ್ರಫ್ ಮುಸ್ಲಿಯಾರ್ ಸ್ವಾಗತಿಸಿದರು, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ, ಅಧ್ಯಕ್ಷತೆ ವಹಿಸಿದರು. ಮುಖ್ಯ ಪ್ರಭಾಷಕರಾಗಿ ಆಗಮಿಸಿದ ಬಹು| ಉವೈಸ್ ಮದನಿ ಅಲ್ ಅಝ್ಹರಿ ತೋಕೆ ಮಾತನಾಡಿ ಕುರ್ ಆನ್ ದೇವವಾಣಿಗಳಿಂದ ತುಂಬಿದ ಗ್ರಂಥವಾಗಿದೆ ಹದಿನಾಲ್ಕು ಶತಮಾನಗಳಿಂದ ಹಿಂದೆ ಕುರ್ ಆನ್ ಸೂಚಿಸಿದ ವೈಜ್ಞಾನಿಕ ಸತ್ಯವಾಗಿದೆ. ಸದುಪದೇಶ, ಸತ್ಪಥ, ಸತ್ಯಧರ್ಮಗಳ ಬಗ್ಗೆ ವಿವರಣೆ ಇರುವ ಕುರ್ ಆನ್ ನ್ನು ನಾವು ಪ್ರತೀ ನಿತ್ಯ ಪಾರಾಯಣ ಮಾಡಬೇಕೆಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಮದರಸ ಮಾನ್ಯೇಜ್ ಮೆಂಟ್ ಅಧ್ಯಕ್ಷ ತಾಜ್ ಮೊಹಮ್ಮದ್, ಮೋಹಿಯದ್ದಿನ್ ಜುಮ್ಮಾ ಮಸೀದಿ ಅಧ್ಯಕ್ಷ ಅಲಿ ಹಾಜಿ, ಜಮಾಲ್ ಬೆಳ್ಳಾರೆ, ಉಧ್ಯಮಿ ಪೈಝಲ್ ಕಟ್ಟೆಕ್ಕಾರ್, ಹಮೀದ್ ಹಾಜಿ, ಇಕ್ಬಾಲ್ ಸುಣ್ಣಮೂಲೆ, ಅಕ್ಬರ್ ಕರಾವಳಿ, ಅಹ್ಮದ್ ಪಾರೆ, ನೌಶಾದ್ ಅಝ್ಹರಿ ದುಗ್ಗಲಡ್ಕ, ಸೌಧಿ ಪ್ರತಿನಿಧಿ ಜಾವೇದ್ ಪೆಲ್ತಡ್ಕ, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮದ್, ಕಾರ್ಯದರ್ಶಿ ಕೆ.ಎಂ ಮೂಸಾನ್ ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಎ.ಹೆಚ್.ವೈ.ಎ ಕಾರ್ಯದರ್ಶಿ ಪಸೀಲು ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂಬ್ರ, ಮದರಸ ಮ್ಯಾನೇಜ್ ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ವಿಖಾಯ ಆಕ್ಟಿವ್ ವಿಂಗ್ ಸದಸ್ಯ ತಾಜುದ್ದೀನ್ ಅರಂತೋಡು, ಅಝರುದ್ಧೀನ್, ಇಸಾಕುದ್ದಿನ್, ಸಿನಾನ್ ಕುನ್ನಿಲ್,ಆಶಿಕ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಠೇಲ್, ಶರೀಫ್ ಪಠೇಲ್ ಸಂಶುದ್ಧೀನ್ ಪೆಲ್ತಡ್ಕ, ಮೊಯಿದು ಕುಕ್ಕುಂಬಳ, ಮನ್ಸೂರು ಪಾರೆಕ್ಕಲ್, ಮುಜೀಬ್ ಮೊದಲಾದವರು ಉಪಸ್ಥಿತರಿದ್ದರು. ತಾಜುದ್ದೀನ್ ಅರಂತೋಡು ವಂದಿಸಿದರು. ಅಬ್ದುಲ್ ಖಾದರ್ ಮೊಟ್ಟೆಂಗಾರ್ ಕಾರ್ಯಕ್ರಮ ನಿರೂಪಿಸಿದರು. ಆಶಿಕ್ ಕುಕ್ಕುಂಬಳ, ಮುಝಮ್ಮಿಲ್, ಸೂಫಿ, ಆರಿಫ್, ಇಕ್ಬಾಲ್ ಬೆಳ್ಳಾರೆ, ಕೆ.ಎಂ ಅನ್ವಾರ್, ಕಬೀರ್ ಸೆಂಟ್ಯಾರ್, ಅರ್ಶಾದ್ ಗುಂಡಿ, ಅನ್ಸಾಫ್ ಮೊದಲಾದವರು ಸಹಕರಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು.

whatsapp image 2025 12 22 at 3.57.10 pm (1)

whatsapp image 2025 12 22 at 3.57.12 pm

Related Articles

Back to top button