ದ.ಕ – 5 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ…

ಮಂಗಳೂರು: ಇಲ್ಲಿನ ಕೋವಿಡ್ ಆಸ್ಪತ್ರೆಯಿಂದ ಐವರು ಸೋಂಕಿತರು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ.
ಇಂದು ಮೂವರು ಬಂಟ್ವಾಳದ ಸೋಂಕಿತರು ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಅತೀ ದೊಡ್ಡ ಕೋವಿಡ್-19 ಹಾಟ್ ಸ್ಪಾಟ್ ಆಗಿದ್ದ ಬಂಟ್ವಾಳ ಈಗ ಸೋಂಕು ಮುಕ್ತವಾಗಿದೆ. ಹಾಗೂ ಬೊಳೂರಿನ ಇಬ್ಬರು ಸೋಂಕಿತ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದ.ಕ ಜಿಲ್ಲಾಡಳಿತವು ಇಂದು ಡಿಸ್ಚಾರ್ಜ್ ಆದ ರೋಗಿಗಳನ್ನು ಬೀಳ್ಕೊಟ್ಟಿದೆ.