ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾದ ಟಿ ಎಂ ಶಾಹೀದ್ ತೆಕ್ಕಿಲ್…

ತಿರುವನಂತಪುರಂ: ಇಂದು ಕೇರಳದ ತಿರುವನಂತಪುರಂನ ಮುಖ್ಯ ಮಂತ್ರಿಗಳ ಗೃಹ ಕಚೇರಿಯಾದ ಕ್ಲಿಫ್ ಹೌಸ್ ನಲ್ಲಿ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರನ್ನ ಭೇಟಿಯಾದ ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಮಾಜಿ ಕಾರ್ಯದರ್ಶಿ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರು ಹದಿನೈದು ನಿಮಿಷಗಳ ಕಾಲ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೇರಳ ಕರ್ನಾಟಕ ಗಡಿಯ ಮಾಕುಟ್ಟದಲ್ಲಿ ಅನ್ಯರ ಪಾಲಾದ ತಮ್ಮ ಪೂರ್ವಜರ ಸ್ಥಳವನ್ನು ತಮ್ಮ ಕುಟುಂಬಕ್ಕೆ ಹಿಂದಿರುಗಿಸಲು ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಈ ಸಂದರ್ಭದಲ್ಲಿ ದಕ ಜಿಲ್ಲಾ ಎನ್ ಎಸ್ ಯು ಐ ಸಾಮಾಜಿಕ ಜಾಲತಾಣದ ಕೊರ್ಡಿನೇಟರ್ ಟಿ ಎಂ ಶಾಜ್ ತೆಕ್ಕಿಲ್, ಶೆಝಿನ್ ತೆಕ್ಕಿಲ್ ಜೊತೆಯಲ್ಲಿದ್ದರು. ಈ ವೇಳೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಪೂರ್ವಜರ ಮೇಲೆ ಹಾಗೂ ತಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಟಿ ಎಂ ಶಾಹೀದ್ ತೆಕ್ಕಿಲ್ ರವರು ಧನ್ಯವಾದಗಳನ್ನು ತಿಳಿಸಿದರು.