ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದ. ಕ.ಜಿಲ್ಲಾ ಘಟಕ ಉದ್ಘಾಟನೆ ಮತ್ತು ಹೊರನಾಡಿನಲ್ಲಿ ತುಳುವರು ಪುಸ್ತಕ ಬಿಡುಗಡೆ…

ಮಂಗಳೂರು: ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ವಿಶ್ವನಾಥ ದೊಡ್ಮನೆಯವರ ಹೊರನಾಡಿನಲ್ಲಿ ತುಳುವರು ಪುಸ್ತಕ ಬಿಡುಗಡೆ ಸಮಾರಂಭವು ಎ.18ರಂದು ಅಪರಾಹ್ನ 2ರಿಂದ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ.ವಾಮನ ರಾವ್ ಬೇಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಘಟಕ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಮುಂಬೈಯ ವಿಶ್ವನಾಥ ದೊಡ್ಮನೆಯವರ ಹೊರನಾಡಿನಲ್ಲಿ ಕನ್ನಡಿಗರು ಕೃತಿಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ‌ ಬಿಡುಗಡೆ ಮಾಡುವರು. ಕೊಳಚಪ್ಪು ಸತ್ಯವತಿ ಭಟ್ ದೀಪ ಪ್ರಜ್ವಲನೆ, ಡಾ. ಶಾಂತಾ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡುವರು. ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು.
ಕಾಸರಗೋಡಿನ ಕನ್ನಡ ಭವನ ಕೇಂದ್ರ ಸಮಿತಿಯ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ-2025ನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ ಕಲ್ಕೂರ, ಕ್ಯಾಪ್ಟನ್ ಗಣೇಶ ಕಾರ್ಣಿಕ್, ಶ್ರೀಪತಿ ಭಟ್ ಮೂಡುಬಿದಿರೆ, ಭುವನಾಭಿರಾಮ ಉಡುಪರಿಗೆ ಪ್ರದಾನ ಮಾಡಲಾಗುವುದು.
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಚುಟುಕು ರಚನಾ ಸ್ಪರ್ಧೆಯ ವಿಜೇತರಾದ ನಿರ್ಮಲಾ ಸುರತ್ಕಲ್, ಗೀತಾ ಎನ್. ನರಿಕೊಂಬು, ಡಾ.ಸುಮತಿ ಪಿ, ಅಬ್ದುಲ್ ಸಮದ್ ಬಾವಾ ಹಾಗೂ ದಯಾವತಿ ಚರಂತಿಮಠ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025 ನೀಡಿ ಗೌರವಿಸಲಾಗುವುದು. ಕೊಳಚಪ್ಪು ಸತ್ಯವತಿ ಭಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚುಟುಕು ಕವಿಗೋಷ್ಠಿಯಲ್ಲಿ 24 ಮಂದಿ ಕವಿಗಳು ಭಾಗವಹಿಸಲಿದ್ದಾರೆ.

whatsapp image 2025 04 14 at 9.55.33 pm

Sponsors

Related Articles

Back to top button