ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ 126 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ…

ಸುಳ್ಯ: ಇತ್ತೀಚೆಗೆ ಹಿದಾಯ ಫೌಂಡೇಶನ್ ಮತ್ತು ಯೂತ್ ಫೆಡರೇಶನ್ ವತಿಯಿಂದ ಆಯೋಜಿಸಲಾದ ಉಚಿತ ಆರೋಗ್ಯ ಮೇಳದಲ್ಲಿ ಕಣ್ಣಿನ ತಪಾಸಣೆಯಲ್ಲಿ ಗುರುತಿಸಲಾದ 126 ಫಲಾನುಭವಿಗಳಿಗೆ ಸುಮಾರು ರೂ 1.25 ಲಕ್ಷ ಮೌಲ್ಯದ ಉಚಿತ ಕನ್ನಡಕ ವಿತರಣಾ ಸಮಾರಂಭ ಸುಳ್ಯ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಅಧ್ಯಕ್ಷತೆಯನ್ನು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್ ವಹಿಸಿದ್ದರು. ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಉದ್ಘಾಟಿಸಿದರು.
ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ. ಮಹಮ್ಮದ್ ಕೆಎಂಎಸ್, ಅನ್ಸಾರ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್,ಎಪಿಎಂಸಿ ಮಾಜಿ ನಿರ್ದೇಶಕ ಅದo ಹಾಜಿ ಕಮ್ಮಾಡಿ, ಅಲ್ಪ ಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು.
ಅನ್ಸಾರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ, ಯೂತ್ ಫೆಡರೇಶನ್ ಪದಾದಿಕಾರಿಗಳಾದ ಶರೀಫ್ ಕಂಠಿ, ಮುನಫರ್ ನಾವೂರು, ಇಕ್ಬಾಲ್ ಸುಣ್ಣ ಮೂಲೆ ಕನಕಮಜಲು, ರಶೀದ್ ಜಟ್ಟಿಪ್ಪಳ್ಳ, ಉನೈಸ್ ಪೆರಾಜೆ,ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಭಾಗವಹಿಸಿದ್ದರು. ಕನ್ನಡಕವನ್ನು ಹಿದಾಯ ಫೌಂಡೇಶನ್ ಮಂಗಳೂರು ಸಂಸ್ಥೆಯು ಪ್ರಾಯೋಜಿಸಿತ್ತು.