ಸುಳ್ಯ ತಾಲೂಕು ಗ್ರಾ ಪಂ ವ್ಯಾಪ್ತಿಯ 9/11 ಏಕ ನಿವೇಶನ ವಿನ್ಯಾಸ ಅನುಮೋದನೆಸೂಡ ಕ್ಕೆ ವಹಿಸಿ ನಗರಾಭಿವೃದ್ಧಿ ಇಲಾಖೆಯಿoದ ಆದೇಶ…

ಸುಳ್ಯ: ಕರಾವಳಿ ಭಾಗದಲ್ಲಿ 1 ಎಕ್ರೆ ವರೆಗಿನ 9/11 ಏಕ ನಿವೇಶನ ವಿನ್ಯಾಸಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ವನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರಕ್ಕೆ ವಹಿಸಿ ಸುಳ್ಯ ಪ್ರತ್ಯೇಕ ಯೋಜನಾ ಪ್ರಾಧಿಕಾರ ವಾಗಿ ಘೋಷಣೆ ಆಗುವ ಮುನ್ನ ವಹಿಸಲಾಗಿತ್ತು.ಇದೀಗ ಸುಳ್ಯ ಪ್ರತ್ಯೇಕ ಯೋಜನಾ ಪ್ರಾಧಿಕಾರ ವಾಗಿ ಅಸ್ತಿತ್ವ ಕ್ಕೆ ಬಂದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಸದ್ರಿ ಆದೇಶವನ್ನು ಪರಿಷ್ಕರಿಸಿ ಸರ್ಕಾರಿ ಆದೇಶ ಸಂಖ್ಯೆ ನ ಅ ಇ 309/2024 ರಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರಕ್ಕೆ ವಹಿಸಿ ಪ್ರತ್ಯಾಯೋಜಿಸಲಾಗಿರುತ್ತದೆ.
ಇದರಿಂದ ಸುಳ್ಯ ತಾಲೂಕಿನ ಜನರಿಗೆ ಹೆಚ್ಚಿನ ಪ್ರಯೋಜನ ವಾಗಲಿದೆ ಎಂದು ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ತಿಳಿಸಿರುತ್ತಾರೆ.