ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಎಲಿಮಲೆ ಶಾಲೆಗೆ ಜಾರು ಬಂಡಿ ಕೊಡುಗೆ…

ಸುಳ್ಯ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 30 ನೇ ಸಮಾರಂಭ ಎಲಿಮಲೆ ಶಾಲೆಯಲ್ಲಿ ನಡೆಯಿತು.

ಅಭಿಯಾನದ ಬಗ್ಗೆ ಸಂಘಟಕರಾದ ಉನೈಸ್ ಪೆರಾಜೆಯವರು ಮಾಹಿತಿಯನ್ನು ನೀಡಿದರು. ಎಲಿಮಲೆ ಶಾಲೆಗೆ ಸುನಿತಾ ಮಹೇಶ್ವರಿ, ಅರ್ಜುನ್ ಕಲ್ಯಾಣ್ ಪುರ ನೀಡಿದ ಜಾರುಬಂಡಿ ಮತ್ತು ಆಟೋಪಕರಣಗಳನ್ನು ದೇವಚಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಲೋಚನಾ ದೇವ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಗ್ರಾಮ ಪಂಚಾಯಿತಿ ಸದಸ್ಯ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಲತಾ,ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆಯವರು ಉಪಸ್ಥಿತರಿದ್ದರು.

ಎಸ್ ಡಿ ಎಮ್ ಸಿ ಅಧ್ಯಕ್ಷ ರಮಾನಂದ,ಶಾಲಾ ಮುಖ್ಯ ಶಿಕ್ಷಕ ಶ್ರೀಧರ್ ಗೌಡ, ವಿಷ್ಣು ಭಟ್ ಮೂಲೆ ತೋಟ, ಸಂತೋಷ್ ,ಸುನಿತಾ, ಜೋಸೆಫ್ ಕುರಿಯಾನ್ ,ಸತೀಶ್ ಕುಲಾಲ್, ಗುರುಮೂರ್ತಿ,ಆಶೀಕ್ ಹರಿಪ್ರಸಾದ್ ಹಾಗೂ ಹಲವಾರು ನಾಯಕರು ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಊರಿನ ಕೊಡುಗೈ ದಾನಿಗಳಿಂದ ಶಾಲಾ ರಸ್ತೆಗೆ ಇಂಟರ್ಲಾಕ್, ಕೈ ತೊಳೆಯುವ ಬೇಸಿನ್, ಸ್ಮಾರ್ಟ್ ರೂಮ್ ಹೀಗೆ ಹಲವಾರು ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಲಾಯಿತು.

ವರದಿ:ತಾಜುದ್ದೀನ್ ಅರಂತೋಡು

Related Articles

Back to top button