ಶಿಕ್ಷಕಿ ಪೂರ್ಣಿಮಾ ಮಡಪ್ಪಾಡಿ – ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ…

ಸುಳ್ಯ: ದಾವಣಗೆರೆಯಲ್ಲಿ ಅ.23 ರಂದು ನಡೆದ ಸರಕಾರಿ ನೌಕರರ ರಾಜ್ಯ ಮಟ್ಟದ ಕರ್ನಾಟಕ ಶಾಸ್ತ್ರೀಯ ಸ್ಪರ್ಧೆಯಲ್ಲಿ ಸ.ಉ.ಹಿ. ಪ್ರಾಥಮಿಕ ಶಾಲೆ ಜಾಲ್ಸೂರು(ಅಡ್ಕಾರು) ಇಲ್ಲಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಎಂ.ಎಂ. (ಪೂರ್ಣಿಮಾ ಮಡಪ್ಪಾಡಿ) ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಇವರು ನ್ಯಾಯವಾದಿಗಳು ಮತ್ತು ನೋಟರಿ ದಿನೇಶ್ ಅಂಬೆಕಲ್ಲು ಇವರ ಪತ್ನಿ ಹಾಗೂ ಮಾಧವ ಮಾಸ್ಟರ್ ಮಡಪ್ಪಾಡಿ ಮತ್ತು ಶ್ರೀಮತಿ ಭವಾನಿ ಟೀಚರ್ ಇವರ ಸುಪುತ್ರಿ.