ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬೆಳ್ತಂಗಡಿ- ಕಬಕ ಶಾಖೆ ಉದ್ಘಾಟನೆ…
ಪುತ್ತೂರು: ಸಹಕಾರ ಅಂದರೆ ವಿಶ್ವಾಸ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವ ಕಾಲಘಟ್ಟದಲ್ಲಿ ಇರುವ ಸಂದರ್ಭದಲ್ಲಿ ಸಹಕಾರ ಬ್ಯಾಂಕುಗಳು ಗ್ರಾಹಕನ ಕಷ್ಟ ಅರಿತು ಸ್ಪಂದಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀಯುತ ಶಶಿಕುಮಾರ್ ರೈ ಬಲ್ಯೊಟ್ಟು ರವರು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬೆಳ್ತಂಗಡಿ ಇದರ 21ನೇ ಕಬಕ ಶಾಖೆಯನ್ನು ಪುತ್ತೂರು ತಾಲೂಕು ಕಬಕ ಮುಖ್ಯ ರಸ್ತೆಯ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಗುರುದೇವ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬೆಳ್ತಂಗಡಿ ಇದರ ಉಪಾಧ್ಯಕ್ಷರಾದ ಶ್ರೀ ಭಗೀರಥ ಜಿ ವಹಿಸಿ, ನಮ್ಮ ಸಹಕಾರ ಸಂಘವು ಕೆಲವೇ ವರ್ಷಗಳಲ್ಲಿ ಇಷ್ಟೊಂದು ಅಭಿವೃದ್ಧಿ ಹೊಂದಲು ಸಿಬ್ಬಂದಿಗಳ ನಗುಮುಖದ ಸೇವೆಯ ಜೊತೆಗೆ ಗ್ರಾಹಕರು ಸಂಘದ ಮೇಲಿಟ್ಟಿರುವ ವಿಶ್ವಾಸವೇ ಕಾರಣವಾಗಿದೆ, ಕಬಕ ಪರಿಸರದ ಗ್ರಾಹಕರ ನಮ್ಮ ಮೇಲೆ ವಿಶ್ವಾಸ ಇಟ್ಟು ಈಗಾಗಲೇ ಸುಮಾರು ಒಂದು ಕೋಟಿ ರೂಪಾಯಿ ಠೇವಣಿ ಇಟ್ಟು ಸುಮಾರು 350 ಮಂದಿ ಸದಸ್ಯತ್ವ ಪಡೆದಿರುತ್ತಾರೆ , ಅವರೆಲ್ಲರ ವಿಶ್ವಾಸ ಉಳಿಸಿಕೊಂಡು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಮಯ ವ್ಯರ್ಥ ಮಾಡದೆ ಶೀಘ್ರವಾಗಿ ಸಾಲ ವಿತರಣೆ ಮಾಡಲಾಗುವುದು ಎಂದರು.
ಸಂಘದ ಭದ್ರತಾ ಕೊಠಡಿಯ ನ್ನು ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿನಯಕುಮಾರ್ ಕೆ, ಭದ್ರತಾ ಕೋಶವನ್ನು ಬನ್ನೂರು ರೈತರ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ, ಗಣಕ ಯಂತ್ರದ ಉದ್ಘಾಟನೆಯನ್ನು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕಡಂಜೆ ಮಾಡಿದರು. ಸಂಘದ ಪ್ರಥಮ ಠೇವಣಿ ಸರ್ಟಿಫಿಕೇಟ್ ಅಡ್ಯಾಲಯ ಪರಿವಾರದ ಸೇವಾ ಸಮಿತಿ ಕಬಕ ಇದರ ಅಧ್ಯಕ್ಷರಾದ ಶ್ರೀ ಸತೀಶ್ ರೈ ದಿಂಬಿರಿಗುತ್ತು, ಉಳಿತಾಯ ಖಾತೆ ಪುಸ್ತಕದ ವಿತರಣೆಯನ್ನು ಅಕ್ಷಯ ಕಾಲೇಜು ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ಮಾಡಿದರು,
ವೇದಿಕೆಯಲ್ಲಿ ಕಬಕ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾದ ಜೆ ಪಿ ಸಂತೋಷ್ ಮುರ, ಕಬಕ ಗೀತಾ ಬಾರ್ ಮಾಲೀಕರಾದ ರಾಮಣ್ಣ ಪೂಜಾರಿ, ಯುವ ವಾಹಿನಿ ರಿಜಿಸ್ಟರ್ಡ್ ಪುತ್ತೂರು ಇದರ ಅಧ್ಯಕ್ಷರಾದ ಉಮೇಶ್ ಬಾಯಾರು, ಕಬಕ ಪಂಚಾಯತಿನ ಮಾಜಿ ಅಧ್ಯಕ್ಷರಾದ ಶ್ರೀ ಶಾಬಾ ಕೆ, ಕಟ್ಟಡ ಮಾಲಕರಾದ ರಮೇಶ್ ಆಚಾರ್ಯ, ಸಂಘದ ನಿರ್ದೇಶಕರುಗಳಾದ ಶ್ರೀ ಕೆ ಪಿ ದಿವಾಕರ, ಶ್ರೀಮತಿ ತನುಜಾ ಶೇಖರ್, ಶ್ರೀ ಶೇಖರ್ ಬಂಗೇರ, ಶ್ರೀ ಗಂಗಾಧರ ಮಿತ್ತಮಾರ್, ಶ್ರೀ ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಗುರುದೇವ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬೆಳ್ತಂಗಡಿ ಇದರ ವಿಶೇಷ ಅಧಿಕಾರಿ ಶ್ರೀ ಎಂ ಮೋನಪ್ಪ ಪೂಜಾರಿ ಕಂಡೆತ್ಯಾರು ಸಂಘದ ವಾಸ್ತವಿಕ ವರದಿಯನ್ನು ವಾಚಿಸಿದರು, ಸಂಘದ ನಿರ್ದೇಶಕರಾದ ಡಾಕ್ಟರ್ ಜಯರಾಮ್ ಕೆ ಬಿ ಸ್ವಾಗತಿಸಿ,ನಿರ್ದೇಶಕರಾದ ಸಂಜೀವ ಪೂಜಾರಿ ಧನ್ಯವಾದವಿತರು. ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀ ಅಶ್ವತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಬಕ ಶಾಖ ವ್ಯವಸ್ಥಾಪಕ ಶ್ರೀ ಮನೋಹರ್ ಜೆ ಸಹಕರಿಸಿದರು.