ದೇಶವನ್ನ ಮಾರಾಟಕ್ಕೆ ಹೊರಟಿರುವ ಕೇಂದ್ರ ಸರಕಾರ – ಟಿ ಎಂ ಶಹೀದ್ ತೆಕ್ಕಿಲ್…

ಸುಳ್ಯ: 70 ವರ್ಷದಲ್ಲಿ ಕಾಂಗ್ರೆಸ್ ಸರಕಾರ ಮಾಡಿದ ದೇಶದ ಹಲವಾರು ಇಲಾಖೆ ಮತ್ತು ಸಂಪತ್ತನ್ನು ಕೇಂದ್ರದ ಮೋದಿ ಸರಕಾರವು ಮಾರಾಟ ಮಾಡಲು ಹೊರಟಿರುವುದನ್ನು ಕೆ ಪಿ ಸಿ ಸಿ ಯ ವಿರಾಜಪೇಟೆ ಕ್ಷೇತ್ರದ ಉಸ್ತುವಾರಿ ಟಿ ಎಂ ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ.
ದೇಶದ ಸಂಪನ್ಮೂಲ ಇಲಾಖೆಗಳಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳನ್ನು, ರೈಲ್ವೆ ಹಳಿಗಳನ್ನು,ಗ್ಯಾಸ್ ಕಂಪೆನಿಗಳನ್ನು, ಪೆಟ್ರೋಲಿಯಂ ಕಂಪೆನಿಗಳನ್ನು, ಎಲ್ ಐ ಸಿ ಯನ್ನು, ಗ್ಯಾಸ್ ಪೈಪ್ ಲೈನ್ ಗಳನ್ನು, ಬಿ. ಎಸ್. ಎನ್. ಎಲ್ ಗಳನ್ನು ಅದಾನಿ ಅಂಬಾನಿಯವರಿಗೆ ಮಾರಾಟ ಮಾಡಿ ದೇಶವನ್ನು 25 ವರ್ಷ ಹಿಂದಕ್ಕೆ ತಳ್ಳಿದೆ ಮೋದಿಯವರ ಮಹಾ ಸಾಧನೆ. ಅಲ್ಲದೆ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಟಿ ಎಂ ಶಹೀದ್ ತೆಕ್ಕಿಲ್ ಟೀಕಿಸಿದರು. ಕಾಂಗ್ರೆಸ್ ಸರಕಾರ 70 ವರ್ಷದಲ್ಲಿ ಏನು ಮಾಡಿದೆ ಎಂದು ಕೇಳುತ್ತಿರುವ ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಭಾರತದ ಪ್ರತಿಯೊಬ್ಬ ಜನರ ಕ್ಷಮೆ ಕೇಳಬೇಕು ಮತ್ತು ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು ಎಂದು ಟಿ ಎಂ ಶಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.

Sponsors

Related Articles

Back to top button